ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ

Last Updated 27 ಫೆಬ್ರುವರಿ 2020, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆಯಾದ ಬೆನ್ನಲ್ಲೇ, ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ನಿರ್ಧರಿಸಿದೆ.

ಈ ಸಂಬಂಧ, ಪತ್ರಿಕಾ ಹೇಳಿಕೆ ನೀಡಿರುವ ಸಂಘವು ಶೀಘ್ರದಲ್ಲಿ ದರ ಹೆಚ್ಚಿಸಲಿದ್ದು ಪ್ರಯಾಣಿಕರು ಸಹಕರಿಸಬೇಕು ಎಂದು ಹೇಳಿದೆ.

'ಆರು ವರ್ಷಗಳಿಂದ ಪ್ರಯಾಣ ದರ ಹೆಚ್ಚಿಸಿಲ್ಲ. 2014ರಲ್ಲಿ ಲೀಟರ್ ಡೀಸೆಲ್‌ಗೆ ₹61.57 ಪೈಸೆ ಇತ್ತು. ಈಗ ₹67 ಇದೆ. ವಿಮೆ, ಟೈರ್, ಆಯಿಲ್ ಬೆಲೆ ಮತ್ತು ರಸ್ತೆ ತೆರಿಗೆ ಹೆಚ್ಚಳವಾಗಿದ್ದು, ಆರು ವರ್ಷಗಳಿಂದ ಬಸ್ಸುಗಳನ್ನು ನಷ್ಟದಲ್ಲೇ ಓಡಿಸಲಾಗುತ್ತಿದೆ. ನಷ್ಟದಿಂದಾಗಿ ಮಾಲೀಕರು ಬಸ್ ಸಂಚಾರವನ್ನೇ ಸ್ಥಗಿತಗೊಳಿಸಿದ್ದಾರೆ' ಎಂದು ಸಂಘದ ಕಾರ್ಯದರ್ಶಿ ಮುರಳಿಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT