ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಫಲವತ್ತಾದ ಕಪ್ಪುನೆಲದಲ್ಲಿ ಮೌಲ್ಯಾಧಾರಿತ ರಾಜಕಾರಣದ ಬೀಜ ಬಿತ್ತಿ ಸಮೃದ್ಧ ಬೆಳೆ ತೆಗೆದವರು ಮುತ್ಸದ್ದಿ ರಾಜಕಾರಣಿ ದಿ.ಬಿ.ರಾಚಯ್ಯ. ಬಡತನ, ಅಸ್ಪೃಶ್ಯತೆ, ಅವಮಾನಗಳನ್ನು ಮೆಟ್ಟಿಲಾಗಿಸಿಕೊಂಡು ಆಲೂರಿನ ರಾಗಿ ಹೊಲದಿಂದ ರಾಜಭವನದವರೆಗೂ ಬೆಳೆದುನಿಂತ ಪರಿಯೇ ಅಚ್ಚರಿ.

ಸ್ವಚ್ಛ ರಾಜಕಾರಣ, ಚಿಂತನಾಶೀಲ ವ್ಯಕ್ತಿತ್ವ, ವಿಮರ್ಶಾತ್ಮಕ ದೃಷ್ಟಿಕೋನ, ನಿರಂತರ ಹೋರಾಟಗಳ ಮೂಲಕ ದಲಿತರ ಅಸ್ಮಿತೆಯಾಗಿ ಗುರುತಿಸಿಕೊಂಡಿದ್ದ ದಿ.ಬಿ.ರಾಚಯ್ಯನವರ ರಾಜಕೀಯ ಹಾಗೂ ಸಾಮಾಜಿಕ ಜೀವನವನ್ನು ಸಾರ್ವಜನಿಕವಾಗಿ ತೆರೆದಿಡಲು ಅವರ ಹುಟ್ಟೂರಾದ ಚಾಮರಾಜಗರ ತಾಲ್ಲೂಕಿನ ಆಲೂರಿನಲ್ಲಿ ಭವ್ಯ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆ.10ರಂದು ಸ್ಮಾರಕವನ್ನು ಲೋಕಾರ್ಪಣೆಗೊಳಿಸುವ ಮೂಲಕ ರಾಜಕೀಯ ಏಳ್ಗೆಗೆ ಕಾರಣವಾದ ಗುರುವಿಗೆ ಗುರು ನಮನ ಸಲ್ಲಿಸಲಿದ್ದಾರೆ. ಬಿ.ರಾಚಯ್ಯ ಅವರ ಜನ್ಮದಿನದಂದೇ ಅವರ ಸ್ಮಾರಕ ಉದ್ಘಾಟನೆಯಾಗುತ್ತಿರುವುದು ವಿಶೇಷ.

ಹೇಗಿದೆ ಸ್ಮಾರಕ: ಆಲೂರು ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ 1 ಎಕರೆ 11 ಗುಂಟೆ ಜಾಗದಲ್ಲಿ ಭವ್ಯ ಸ್ಮಾರಕ ನಿರ್ಮಿಸಲಾಗಿದೆ. ನೆಲ ಮಹಡಿ ಹಾಗೂ ಮೊದಲ ಮಹಡಿ ಸೇರಿ 6,400 ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಮಾರಕವು ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಿದೆ.

ರಾಚಯ್ಯ ಅವರ ವ್ಯಕ್ತಿತ್ವಕ್ಕೆ ಹೊಂದುವಂತೆ ಕೆಸರಿನಲ್ಲಿ ಅರಳುವ ಕಮಲದ ರೂಪಕದಂತೆ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಪ್ರಸಿದ್ಧ ಆರ್ಕಿಟೆಕ್ಟ್ ಕಿಶೋರ್ ಚಂದ್ರ ಅವರ ಪರಿಕಲ್ಪನೆಯಲ್ಲಿ ಮೂಡಿರುವ ಸ್ಮಾರಕದ ನಿರ್ಮಾಣ ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ. ಸ್ಮಾರಕಕ್ಕೆ ಪೂರ್ತಿಯಾಗಿ ರಾಜಸ್ತಾನದಿಂದ ತರಿಸಲಾಗಿರುವ ಮಾರ್ಬಲ್ ಬಳಕೆ ಮಾಡಲಾಗಿದೆ.

₹ 4.87 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಮೊದಲ ಹಂತದಲ್ಲಿ ಸ್ಮಾರಕ ಭವನ, ಕಾಂಪೌಂಡ್ ಪೂರ್ಣಗೊಂಡಿದೆ. ಉಳಿದಂತೆ, ಇಂಟರ್‌ಲಾಕ್ ಪಾಥ್‌ವೇ, ಹುಲ್ಲುಹಾಸು, ಆಂಪಿ ಥಿಯೇಟರ್, ಶೌಚಾಲಯಗಳು, ಚಿಕ್ಕ ಮಕ್ಕಳ ಉದ್ಯಾನ ನಿರ್ಮಾಣ ಮಾಡಬೇಕಿದೆ.

ಸ್ಮಾರಕದಲ್ಲಿ ಏನಿರಲಿದೆ: ಬಿ.ರಾಚಯ್ಯ ಅವರ ಜೀವನ ಚರಿತ್ರೆ ಬಿಂಬಿಸುವ 120ಕ್ಕೂ ಹೆಚ್ಚು ಛಾಯಾ ಚಿತ್ರಗಳ ಗ್ಯಾಲರಿ ಸ್ಮಾರಕದಲ್ಲಿ ಪ್ರದರ್ಶಿಸಲಾಗುತ್ತಿದೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು, ವಿವಿಧ ಇಲಾಖೆಗಳ ಸಚಿವರಾಗಿ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಮಾಹಿತಿ ಲಭ್ಯವಾಗಲಿದೆ.

ಇದರ ಜತೆಗೆ ರಾಚಯ್ಯ ಅವರು ಉಪಯೋಗಿಸುತ್ತಿದ್ದ ಕೋಟ್, ವಾಚ್, ವಾಕಿಂಗ್ ಸ್ಟಿಕ್, ವಿಸಿಟಿಂಗ್ ಕಾರ್ಡ್ ಹಾಗೂ ಸಾರ್ವಜನಿಕ ಜೀವನದಲ್ಲಿ ದೊರೆತ ಅಪರೂಪದ ಸ್ಮರಣಿಕೆಗಳು, ಪುಸ್ತಕಗಳು ಸ್ಮಾರಕದಲ್ಲಿ ವೀಕ್ಷಣೆಗೆ ಲಭ್ಯವಿದೆ. ಶಿವಮೊಗ್ಗ ಜಿಲ್ಲೆಯ ಕವಿಶೈಲದಲ್ಲಿ ಇರುವ ಕುವೆಂಪು ಅವರ ಕವಿಮನೆಯ ಮಾದರಿ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಪ್ರೇರಣೆ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಮಂಜುಳಾ.

ಮುಂದಿನ ದಿನಗಳಲ್ಲಿ ಸ್ಮಾರಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ಸಮಾಜ ಕಲ್ಯಾಣ ಇಲಾಖೆ ಭವನದ ನಿರ್ವಹಣೆಯ ಉಸ್ತುವಾರಿ ವಹಿಸಲಿದೆ. ಬಾಕಿ ಕಾಮಗಾರಿಗಳನ್ನು ಶೀಘ್ರ ಮುಗಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಜನ್ಮದಿನವೇ ಶಂಕುಸ್ಥಾಪನೆ, ಉದ್ಘಾಟನೆ: 2017, ಆ.10ರಂದು ರಾಚಯ್ಯ ಅವರ ಜನ್ಮದಿನದಂದು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಲೂ ಕೂಡ ರಾಚಯ್ಯ ಅವರ ಜನ್ಮದಿನದಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮಾರಕ ಲೋಕಾರ್ಪಣೆ ಮಾಡುತ್ತಿದ್ದಾರೆ.

‘ಮೂವರ ಸ್ಮಾರಕಕ್ಕೆ ತಲಾ ಒಂದು ಕೋಟಿ’: ದಲಿತ ನಾಯಕರಾಗಿದ್ದ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ ಹಾಗೂ ಎನ್.ರಾಚಯ್ಯ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಬಜೆಟ್‌ನಲ್ಲಿ ತಲಾ ₹ 1 ಕೋಟಿ ಅನುದಾನ ಮೀಸಲಿಟ್ಟಿದ್ದರು. ಬಳಿಕ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಶ್ರೀರಾಮುಲು 50ಲಕ್ಷಕ್ಕೂ ಹೆಚ್ಚು ಅನುದಾನ, ಬಸವರಾಜ ಬೊಮ್ಮಾಯಿ ₹ 1.25 ಕೋಟಿ ಅನುದಾನ, ನಂತರ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವನ ಪೂರ್ಣಗೊಳಿಸಲು ₹ 2.12 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು ಎಂದು ಬಿ.ರಾಚಯ್ಯ ಅವರ ಪುತ್ರ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಬಿ.ರಾಚಯ್ಯ ಅವರ 50 ವರ್ಷಗಳ ರಾಜಕೀಯ ಜೀವನದಲ್ಲಿ ಶಾಸಕರಾಗಿ ರಾಜ್ಯದ ಮಂತ್ರಿಗಳಾಗಿ ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸಚಿವರಾಗಿ ಸಂಸದರಾಗಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರದಲ್ಲಿ 16 ಕಾಲೊನಿಗಳನ್ನು ನಿರ್ಮಾಣ ಮಾಡಿ ಕೃಷಿ ಭೂಮಿ ಇಲ್ಲದ ಎಲ್ಲ ಜಾತಿಗಳ ಕಡು ಬಡವರಿಗೆ ತಲಾ 4 ಎಕರೆ ಕೃಷಿ ಭೂಮಿ ಹಂಚಿಕೆ ಮಾಡಿದ್ದಾರೆ. ಸುವರ್ಣಾವತಿ ಜಲಾಶಯ ಹಾಗೂ ಚಿಕ್ಕಹೊಳೆ ಜಲಾಶಯಗಳ ನೀರನ್ನು ಹರಿಸಿ 16000 ಹೆಕ್ಟೇರ್ ಭೂಮಿಗೆ ನೀರುಣಿಸಿದ್ದಾರೆ. ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗುವಲ್ಲಿ ಪಾಲಿಟೆಕ್ನಿಕ್ ಕಾಲೇಜು ಪಿಯು ಕಾಲೇಜು ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರ ನಿರ್ಮಾಣದ ಹಿಂದೆ ಅವರ ಶ್ರಮ ಇದೆ. ಗೃಹಸಚಿವರಾಗಿದ್ದಾಗ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ನಿಷೇಧಿಸಿದ್ದಾರೆ. ಶಿಕ್ಷಣ ಮಂತ್ರಿಯಾಗಿದ್ದಾಗ ಬಡವರಿಗೂ ತಾಂತ್ರಿಕ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 1985–86ರಲ್ಲಿ ಮೊದಲ ಬಾರಿಗೆ ಸಿಇಟಿ ಪರಿಚಯಿಸಿದರು ಎಂದು ಪುತ್ರ ಬಾಲರಾಜ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.