ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನಕ್ಕೆ ಬಂದು ಕಥೆ, ಕವನ ಬರೆದ...

Last Updated 23 ಫೆಬ್ರುವರಿ 2022, 19:43 IST
ಅಕ್ಷರ ಗಾತ್ರ

ಮಳವಳ್ಳಿ: ಅಂಗನವಾಡಿ ಕೇಂದ್ರದಲ್ಲಿ ಕಳವು ಮಾಡಲು ಬಂದವನೊಬ್ಬ ಕತೆ, ಕವನ ಬರೆದು ಹೋಗಿದ್ದಾನೆ. ತನ್ನ ಬಾಲ್ಯ, ತನ್ನ ಕುಟುಂಬದ ಬಗ್ಗೆ ತನ್ನದೇ ಶೈಲಿಯಲ್ಲಿ ವರ್ಣಿಸಿದ್ದಾನೆ.

ತಾಲ್ಲೂಕಿನ ಹೆಬ್ಬಣಿ ಗ್ರಾಮದ ಅಂಗನವಾಡಿಯಲ್ಲಿ ಫೆ.2ರಂದು ಘಟನೆ ನಡೆದಿದೆ. ಅಂಗನವಾಡಿ ಸಿಬ್ಬಂದಿ ಮಂಗಳವಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಬೀಗ ಮುರಿದು ಒಳನುಗ್ಗಿರುವ ಕಳ್ಳ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ಮಾಡಿದ್ದಾನೆ. ಯಾವುದೇ ವಸ್ತುಗಳು ಸಿಗದಿದ್ದಾಗ ಅಲ್ಲಿಯೇ ಅನ್ನ ಮಾಡಿ, ಪುಳಿಯೊಗರೆ ತಯಾರಿಸಿ ಸೇವಿಸಿದ್ದ. ಬೀರುವಿನಲ್ಲಿದ್ದ ನೋಟ್‌ ಬುಕ್‌ ತೆಗೆದುಕೊಂಡು 3 ಪುಟದಲ್ಲಿ ಕತೆ, ಕವನ ಬರೆದಿದ್ದಾನೆ.

ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಂಡಿತಹಳ್ಳಿ ಪಿಡಿಒ ಮಹದೇವು ಪರಿಶೀಲನೆ ನಡೆಸಿದ್ದಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT