ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಪರಿಶಿಷ್ಟರ ಹಣ ಗ್ಯಾರಂಟಿಗೆ: ವಿಚಾರ ಸಂಕಿರಣ ನಾಳೆ

ಸರ್ಕಾರದ ವಿರುದ್ಧ ಆಂದೋಲನದ ಉದ್ದೇಶ, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ಆಯೋಜನೆ
Published 6 ಅಕ್ಟೋಬರ್ 2023, 6:00 IST
Last Updated 6 ಅಕ್ಟೋಬರ್ 2023, 6:00 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್ ಸರ್ಕಾರವು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿರುವುದರ ವಿರುದ್ಧ ಜನಾಂದೋಲನ ರೂಪಿಸುವುದಕ್ಕಾಗಿ, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಜಿಲ್ಲಾ ಘಟಕವು ಶನಿವಾರ (ಅ.7) ನಗರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಜಿಲ್ಲಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ‘ನಗರದ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಚಾರ ಸಂಕಿರಣ ನಡೆಉಯಲಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಲಿದ್ದಾರೆ. ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಮಾಜಿ ಸಚಿವರಾದ ಎನ್‌.ಮಹೇಶ್‌, ಕೋಟೆ ಎಂ.ಶಿವಣ್ಣ, ಎಸ್‌.ಬಾಲರಾಜು, ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು, ಮೈಸೂರು, ಚಾಮರಾಜನಗರ ನಾಯಕರ ಸಂಘದ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ ಇತರರು ಪಾಲ್ಗೊಳ್ಳಲಿದ್ದಾರೆ. ವಿವಿಧ ದಲಿತ ಸಂಘಟನೆಗಳ ಮುಖಂಡರು ಕೂಡ ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ’ ಎಂದರು.  

ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಹಣದಲ್ಲಿ ₹11,500 ಕೋಟಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಸರ್ಕಾರ, ಮುಂದಿನ ದಿನಗಳಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನೂ ಕಿತ್ತುಕೊಳ್ಳಬಹುದು. ಹಾಗಾಗಿ, ಇದರ ವಿರುದ್ಧ ಜನಾಂದೋಲನ ನಡೆಸಲಾಗುತ್ತಿದೆ. ಸರ್ಕಾರದ ನಡೆಯನ್ನು ದಲಿತರಿಗೆ ತಿಳಿಸಲಾಗುತ್ತಿದೆ’ ಎಂದು ಹೇಳಿದರು. 

‘ಬಿಜೆಪಿ ಸರ್ಕಾರ ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿ ಹೆಚ್ಚು ಮಾಡಿತ್ತು. ಅದನ್ನು ಸರ್ಕಾರ ಅನುಷ್ಠಾನಗೊಳಿಸಲಿ. ಸರ್ಕಾರವು ₹11,500 ಕೋಟಿ ಹಣವನ್ನು ವಾಪಸ್‌ ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆಗೆ ಕೊಡುವವರೆಗೆ ಇದರ ವಿರುದ್ಧ ವಿಚಾರಸಂಕಿರಣ, ಪ್ರತಿಭಟನೆಯಂತಹ ಹೋರಾಟಗಳನ್ನು ಮಾಡಲಾಗುವುದು’ ಎಂದು ಅವರು ಎಚ್ಚರಿಸಿದರು. 

ಪರಿಷ್ಟರಿಗೆ ಮೀಸಲಾಗಿರುವ ಹಣವನ್ನು ಪಡೆದಿರುವ ಸರ್ಕಾರ ಕೆಲವು ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಿಲ್ಲ. ಇದರಿಂದ ಎರಡೂ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ದಲಿತ ಸಮುದಾಯದ ಯಾರೊಬ್ಬರೂ  ಸಚಿವರು, ಶಾಸಕರು ಮಾತನಾಡುತ್ತಿಲ್ಲ. ಈವರೆಗೂ ದೇವರನ್ನು ನಂಬದೇ ಇದ್ದ ಸಿದ್ದರಾಮಯ್ಯ, ಮಾಟ ಮಾಡಿಸಿದ್ದಾರೆನೋ ಎಂಬ ಸಂಶಯ ಮೂಡಿದೆ’ ಎಂದು ಪ್ರಕಾಶ್‌ ಹೇಳಿದರು. 

ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಎಂ.ಎನ್‌.ರಾಜು ಮಾತನಾಡಿದರು. ವೇದಿಕೆಯ ಸದಸ್ಯರಾದ ನಲ್ಲೂರು ಪರಮೇಶ್, ಮುತ್ತಿಗೆ ಮೂರ್ತಿ, ಜಗದೀಶ್, ಟಗರಪುರ ರೇವಣ್ಣ, ಪರಶಿವಯ್ಯ, ಹೊಂಗನೂರು‌ಮಹದೇವಸ್ವಾಮಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT