ಚಾಮರಾಜನಗರ:ನಗರದ ಭಾರತ ಸೇವಾದಳ ಜಿಲ್ಲಾ ಸಮಿತಿ ಕಚೇರಿಯಲ್ಲಿ ಸೇವಾದಳ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಗುರುವಾರ ಚುನಾವಣೆ ನಡೆಯಿತು. ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ವೆಂಕಟನಾಗಪ್ಪಶೆಟ್ಟಿ (ಬಾಬು), ಉಪಾಧ್ಯಕ್ಷರಾಗಿ ಕೊಂಗರಹಳ್ಳಿ ನಾಗರಾಜು, ಕಾರ್ಯದರ್ಶಿಯಾಗಿ ಅಪ್ಪು ಮಾಸ್ಟರ್ ಮಹದೇವಯ್ಯ, ಕೇಂದ್ರ ಸಮಿತಿ ಸದಸ್ಯರಾಗಿ ಎಂ.ಬಿ.ಲಿಂಗರಾಜು, ಕೋಶಾಧ್ಯಕ್ಷರಾಗಿ ವಿ.ಶ್ರೀನಿವಾಸಪ್ರಸಾದ್, ನೂತನ ಸದಸ್ಯರಾಗಿ ಎನ್.ಜೋಸೆಫ್, ಮಹೇಶ್ ಜಿ.ಬಳಿಗಾರ್, ವೆಂಕಟೇಶ್ ನಾಯ್ಕ, ವೈ.ಎಂ.ಮಂಜುನಾಥ್, ಷಡಕ್ಷರಸ್ವಾಮಿ, ನಾಗೇಂದ್ರ, ಆರ್.ಎನ್.ರೇಖಾ, ಉತ್ತವಳ್ಳಿ ಶಿವರಾಜು ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಸಮಿತಿ ಸದಸ್ಯರಾಗಿ ತಗಡೂರಯ್ಯ, ವಿ.ಮಹೇಶ್ವರಿ ಆಯ್ಕೆಯಾದರು.

ನೂತನ ಅಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ಮಾತನಾಡಿ, ‘ನಾ.ಸು.ಹರ್ಡಿಕರ್ ಸ್ಥಾಪಿಸಿದ ಭಾರತ್ ಸೇವಾದಳದ ಧ್ಯೇಯ ಸೇವೆಗಾಗಿ ಬಾಳು ಎಂಬುದಾಗಿದೆ. ಇದರಲ್ಲಿ ಅವಕಾಶ ಸಿಗುವುದು ಅಪರೂಪ. ದೇಶಪ್ರೇಮ, ದೇಶಭಕ್ತಿ ಬೆಳೆಸುವುದರಲ್ಲಿ ಸೇವಾದಳದ ಕಾರ್ಯ ಅನನ್ಯ’ ಎಂದರು.

‘ಸೇವಾದಳವನ್ನು ಜಿಲ್ಲೆಯಲ್ಲೇ ಮಾದರಿಯಾಗಿ ಮಾಡಲು ಸೇವಾದಳದ ಸದಸ್ಯರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ಸೇವಾದಳದ ತಾಲ್ಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿದರು. ಚುನಾವಣಾಧಿಕಾರಿಯಾಗಿ ವಲಯ ಸಂಘಟಕ ಕೆ.ಈರಯ್ಯ ಕಾರ್ಯ ನಿರ್ವಹಿಸಿದರು. ಸೇವಾದಳ ತಾಲ್ಲೂಕು ಉಪಾಧ್ಯಕ್ಷ ಸಿ.ಮಲ್ಲಿಕಾರ್ಜುನ್, ಕೊಳ್ಳೇಗಾಲ ತಾಲ್ಲೂಕು ಘಟಕದ ಬಿ.ಕೆ.ಪ್ರಕಾಶ್, ಕುಮಾರಸ್ವಾಮಿ, ಸಿ.ಎಂ.ಸುಬ್ರಹ್ಮಣ್ಯ (ಕಲಾಮಣಿ), ಎಚ್.ಎಂ.ಸತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.