ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕೊರತೆಯಿಂದಾಗಿ ಸರ್ಕಾರದ ಸೇವೆ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಪರದಾಡುವಂತಾಗಿದೆ. ಕಚೇರಿಗಳಲ್ಲಿ ಅಧಿಕಾರಿಗಳ ಅಲಭ್ಯತೆಯಿಂದ ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕೊರತೆ ಹೆಚ್ಚಾಗಿದೆ. ಹಾಲಿ ಇರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಹೊರಿಸಲಾಗಿದ್ದು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಸಮಯಕ್ಕೆ ಸರಿಯಾಗಿ ಸೇವೆಗಳು ದೊರೆಯದೆ ರೈತರಿಗೆ ಸಮಸ್ಯೆಯಾಗುತ್ತಿದೆ.

ಸಂತೇಮರಹಳ್ಳಿ ಹೋಬಳಿಯು 42 ಕಂದಾಯ ಗ್ರಾಮಗಳನ್ನು ಹೊಂದಿದೆ. 25 ದಾಖಲೆ ಗ್ರಾಮಗಳು ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು 23 ವೃತ್ತ ಗ್ರಾಮಗಳಿವೆ. ಒಂದು ವೃತ್ತಕೊಬ್ಬರು ಆಡಳಿತಾಧಿಕಾರಿಯಂತೆ 23 ಗ್ರಾಮ ಆಡಳಿತಾಧಿಕಾರಿಗಳನ್ನು ನೇಮಿಸಬೇಕಿತ್ತು. ಆದರೆ, ಸದ್ಯ ನಾಡಕಚೇರಿ ವ್ಯಾಪ್ತಿಯಲ್ಲಿ 14 ಗ್ರಾಮ ಆಡಳಿತಾಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ನಾಡಕಚೇರಿ ವ್ಯಾಪ್ತಿಯ ಗ್ರಾಮಗಳಿಗೆ ಅನುಗುಣವಾಗಿ ಗ್ರಾಮ ಆಡಳಿತಾಧಿಕಾರಿಗಳು ನೇಮಕವಾಗಿಲ್ಲ. ಓರ್ವ ಗ್ರಾಮ ಆಡಳಿತಾಧಿಕಾರಿ ಎರಡೆರಡು ಗ್ರಾಮಗಳಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸುತ್ತೂರು, ಇರಸವಾಡಿ, ಗೂಳಿಪುರ, ನವಿಲೂರು, ರೇಚಂಬಳ್ಳಿ, ಕಣ್ಣೇಗಾಲ, ಇರಸವಾಡಿ ಹಾಗೂ ಕುದೇರು ಗ್ರಾಮಗಳಿಗೆ ಕಾಯಂ ಗ್ರಾಮ ಆಡಳಿತಾಧಿಕಾರಿ ನೇಮಕವಾಗಿಲ್ಲ. ಅಕ್ಕ ಪಕ್ಕದ ಗ್ರಾಮಗಳ ಗ್ರಾಮಾಡಳಿತಾಧಿಕಾರಿಗಳಿಗೆ ಪ್ರಭಾರ ಹುದ್ದೆ ನೀಡಲಾಗಿದ್ದು ಹೆಚ್ಚುವರಿ ಗ್ರಾಮಗಳನ್ನು ನೋಡಿಕೊಳ್ಳಬೇಕಾಗಿದೆ.

ವೃತ್ತ ಗ್ರಾಮಗಳಲ್ಲಿ ಇರಬೇಕಾದ ಆಡಳಿತಾಧಿಕಾರಿಗಳು ಪ್ರಭಾರ ವಹಿಸಿಕೊಂಡಿರುವ ಗ್ರಾಮಗಳಿಗೆ ಹೋಗಬೇಕಾಗಿರುವುದರಿಂದ ಸಾರ್ವಜನಿಕರನ್ನು ಸಕಾಲದಲ್ಲಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಜನರ ಸಮಸ್ಯೆಗಳಿಗೂ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮ ಆಡಳಿತಾಧಿಕಾರಿಗಳ ಕೊರತೆಯಿಂದಾಗಿ ಒಂದೆರಡು ದಿನಗಳಲ್ಲಿ ಆಗಬೇಕಾದ ಕೆಲಸ ಒಂದು ವಾರಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಸರ್ಕಾರಕ್ಕೆ ವರದಿ ಸಲ್ಲಿಸುವುದು, ವಾಸಸ್ಥಳ ದೃಡೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ವಂಶವೃಕ್ಷ, ಬೆಳೆ ದೃಢೀಕರಣ, ಪಿಂಚಣಿ ಸೇರಿದಂತೆ ಇನ್ನಿತರ ಸೇವೆಗಳನ್ನು ನೀಡುವುದು ಗ್ರಾಮ ಆಳಿತಾಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ. ಗ್ರಾಮ ಆಡಳಿತಾಧಿಕಾರಿಗಳು ಹೆಚ್ಚು ಗ್ರಾಮಗಳ ಜವಾಬ್ದಾರಿಯನ್ನು ಹೊಂದಿರುವುದರಿಂದ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಜೊತೆಗೆ ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಮಾಡಿಕೊಡಲಾಗದೆ ಗ್ರಾಮಸ್ಥರ ಅಸಮಾಧಾನ ಎದುರಿಸಬೇಕಾಗಿದೆ.

ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವುದರ ಜೊತೆಗೆ ಚುನಾವಣೆ, ಸಭೆ, ಸಮಾರಂಭಗಳು, ತರಬೇತಿ, ಜನಗಣತಿ ಹಾಗೂ ಸರ್ಕಾರದಿಂದ ಅನುಷ್ಠಾನಗೊಂಡ ಕೆಲಸ ಕಾರ್ಯಗಳಲ್ಲೂ ಆಡಳಿತಾಧಿಕಾರಿಗಳು ತೊಡಗಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಗ್ರಾಮ ಆಡಳಿತಾಧಿಕಾರಿಗಳು.

ಜೀವನ ನಿರ್ವಹಣೆಗಾಗಿ ಗ್ರಾಮಗಳಿಂದ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತಿರುವವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಒಂದೆರಡು ದಿನ ರಜೆ ಹಾಕಿ ಗ್ರಾಮಕ್ಕೆ ಬರುತ್ತಾರೆ. ಆದರೆ, ಅಧಿಕಾರಿಗಳ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಒಂದುವಾರ ರಜೆ ಹಾಕಿ ಅಧಿಕಾರಿಗಳಿಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ದೂರುತ್ತಾರೆ ಗ್ರಾಮದ ವೆಂಕಟೇಶ್.

ಗ್ರಾಮೀಣ ಭಾಗದ ಬಹತೇಕ ಕಾರ್ಯಗಳು ಗ್ರಾಮ ಅಧಿಕಾರಿಗಳಿಂದ ನಡೆಯಬೇಕಾಗಿರುವುದರಿಂದ ಗ್ರಾಮಸ್ಥರು ಕೂಡ ಸೇವೆಗಳನ್ನು ಪಡೆದುಕೊಳ್ಳಲು ಕೂಲಿ ಕೆಲಸ ಹಾಗೂ ಕೃಷಿ ಕಾರ್ಯಗಳಿಗೆ ತೆರಳಲು ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಅಗತ್ಯ ಸಂಖ್ಯೆಯ ಗ್ರಾಮ ಆಡಳಿತಾಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಹೆಗ್ಗವಾಡಿ ಗ್ರಾಮದ ರೈತ ನಂಜುಂಡ.

ಗ್ರಾಮಕ್ಕೊಬ್ಬರಂತೆ ಗ್ರಾಮಾಡಳಿತಾಧಿಕಾರಿ ನೇಮಕವಾದರೆ ರೈತರ ಹಾಗೂ ಸಾರ್ವಜನಿಕರ ಕೆಲಸಗಳು ಸುಗಮವಾಗುತ್ತವೆ. ಜತೆಗೆ ನಾಡಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಸರ್ಕಾರ ಪ್ರತಿ ಕಂದಾಯ ಗ್ರಾಮಗಳಿಗೆ ಗ್ರಾಮಾಡಳಿತಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಬಸವಣ್ಣ.

ಸರ್ಕಾರ ಈಚೆಗಷ್ಟೆ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಮಾಡಿಕೊಂಡಿದ್ದು ಖಾಲಿ ಹುದ್ದೆಗಳಿಗೆ ನಿಯೋಜನೆ ಮಾಡಲಾಗಿದೆ. ಆದರೂ ಸಿಬ್ಬಂದಿ ಕೊರತೆ ಸಂಪೂರ್ಣ ಬಗೆಹರಿದಿಲ್ಲ. ಶೀಘ್ರ ನೇಮಕಾತಿ ನಡೆಯುವ ನಿರೀಕ್ಷೆಯಿದ್ದು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎನ್ನುತ್ತಾರೆ ಚಾಮರಾಜನಗರ ತಹಶೀಲ್ದಾರ್ ಗಿರಿಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.