ಗುರುವಾರ , ಜನವರಿ 23, 2020
20 °C

ಹಾವು ಕಚ್ಚಿ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿ ಬುಧವಾರ ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 

ಗ್ರಾಮದ ನಾಗರಾಜು ಎಂಬುವವರ ಪತ್ನಿ ಪಾರ್ವತಿ (41) ಮೃತಪಟ್ಟವರು. ದಂ‍ಪ‍ತಿ ಬುಧವಾರ ರಾಗಿ ಕಟಾವು ಮಾಡುವುದಕ್ಕಾಗಿ ತಮ್ಮ ಜಮೀನಿಗೆ ತೆರಳಿದ್ದರು. 

ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿ ಹೊಲದಲ್ಲಿದ್ದ ಹಾವು ಪಾರ್ವತಿ ಅವರಿಗೆ ಕಚ್ಚಿತು. ತಕ್ಷಣ ಅವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಆದರೆ, ಅದು ಫಲಕಾರಿಯಾಗಲಿಲ್ಲ. ವಿಷ ಏರಿದ್ದರಿಂದ ಪಾರ್ವತಿ ಅವರು ಮೃತಪಟ್ಟರು ಎಂದು ‌ಪೊಲೀಸರು ಹೇಳಿದ್ದಾರೆ. 

ಪಾರ್ವತಿ ಅವರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ರಾಮಸಮುದ್ರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು