ಗುರುವಾರ , ನವೆಂಬರ್ 26, 2020
19 °C

ಸುಳ್ವಾಡಿ ಮಾರಮ್ಮ ದೇವಾಲಯ ಶನಿವಾರದಿಂದ ಭಕ್ತರಿಗೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ‌ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ‌ ಮೂರನೇ ದಿನದ ಶುಕ್ರವಾರವೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು, ಶನಿವಾರ ಮಧ್ಯಾಹ್ನದಿಂದ ಭಕ್ತರಿಗೆ ಮುಕ್ತವಾಗಲಿದೆ. 

ಶುಕ್ರವಾರ ದುರ್ಗಾ ಹೋಮ ನಡೆಯಿತು. ಶುಕ್ರವಾರ ಬೆಳಿಗ್ಗೆ 9.40ಕ್ಕೆ ಪ್ರಾರಂಭವಾದ ಹೋಮ, ರಾತ್ರಿವರೆಗೂ ನಡೆಯಿತು. ಪ್ರಭಾರ ತಹಶೀಲ್ದಾರ್ ಕೆ.ಕುನಾಲ್ ಅವರು ಹೋಮದಲ್ಲಿ ಭಾಗಿಯಾದರು. 

ಶನಿವಾರ ಬೆಳಿಗ್ಗೆ ಕುಂಭಾಭಿಷೇಕ ಹಾಗೂ ರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆಯಿಂದಲೇ ಈ ಅಭಿಷೇಕಗಳು ಜರುಗಲಿದ್ದು ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗಲಿವೆ. ಮಹಾಮಂಗಳಾರತಿ ನಂತರ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇದಕ್ಕಾಗಿ ದೇವಾಲಯ ಮುಂಭಾಗ ಬ್ಯಾರಿಕೇಡ್‌ ನಿರ್ಮಿಸಲಾಗಿದ್ದು, ಶನಿವಾರ 12.30 ರ ಬಳಿಕ ಭಕ್ತರಿಗೆ ಮಾರಮ್ಮನ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.