ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರವಂತ ಪ್ರಜೆಗಳನ್ನು ತಯಾರು ಮಾಡಿ: ಮಲ್ಲಿಕಾರ್ಜುನ

ಶಿಕ್ಷಕರ ದಿನಾಚರಣೆ, ಗುರುವಂದನೆ: ಮಲ್ಲಿಕಾರ್ಜುನ
Published 21 ಸೆಪ್ಟೆಂಬರ್ 2023, 14:46 IST
Last Updated 21 ಸೆಪ್ಟೆಂಬರ್ 2023, 14:46 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಶಿಕ್ಷಕ ವೃತ್ತಿಯಂತಹ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ. ಈ ವೃತ್ತಿಯಲ್ಲಿ ಇರುವವರು ಅದೃಷ್ಟವಂತರು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೇಗೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಂದಕ್ಷರ ಕಲಿಸಿದಾತಾನೇ ಗುರು. ಶಿಕ್ಷಕ ಸಮಾಜದ ಕಣ್ಣು, ಶಿಕ್ಷಕ ವೃತ್ತಿಯಲ್ಲಿ ತ್ಯಾಗ ಮನೋಭಾವನೆ ಬೇಕು, ಅಗ ಮಾತ್ರ ಸಮಾಜ ಸಮೃದ್ಧಿ ಹಾಗೂ ಸುಧಾರಣೆಯಾಗಲಿದೆ ಎಂದರು.

ಜ್ಞಾನದ ಹಸಿವನ್ನು ಇಂಗಿಸುವ ಪರಮೋಚ್ಛ ಶಕ್ತಿ ಶಿಕ್ಷಕರಲ್ಲಿದ್ದು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕಾಗಿದೆ. ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ದೇಶದ ಅಭ್ಯುದಯಕ್ಕೆ ಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಡೀ ದೇಶ ತಮ್ಮ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟಿದ್ದು, ತಮ್ಮ ಕಾರ್ಯ ವೈಖರಿಯನ್ನು ಅವಲೋಕಿಸುತ್ತಿದೆ. ಗುರುವಿನ ಸ್ಥಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಜೀವನದ ಪ್ರತಿಯೊಂದು ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಮತ್ತು ಜವಬ್ದಾರಿಯ ಬಗ್ಗೆ ಕಲಿಸಿ ಕೊಡುತ್ತಾರೆ. ಹಾಗಾಗಿ ಇಷ್ಟೆಲ್ಲಾ ಜೀವನದ ಪಾಠಗಳನ್ನು ಕಲಿಸಿಕೊಡುವ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಪ್ರತಿ ವರ್ಷ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಕ ಅನ್ನೋದು ಕೇವಲ ಬರೀ 3 ಅಕ್ಷರಗಳ ಪದವಲ್ಲ. ಒಂದು ಶಕ್ತಿ ಎಂದರು.

ತೆರಕಣಾಂಬಿ ಮೊರಾಜಿ೯ ಶಾಲೆಯ ಪ್ರಾಂಶುಪಾಲ ಮಹದೇವಪ್ರಸಾದ್, ಶಿವಕುಮಾರ, ರಾಜೇಂದ್ರ ಮಾತನಾಡಿದರು. ಶಾಲೆಯ ವತಿಯಿಂದ ಎಲ್ಲಾ ಗುರುವೃಂದವನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು.

ಪ್ರಭಾರ ಪ್ರಾಂಶುಪಾಲ ಮಹೇಂದ್ರ, ನಿಲಯಪಾಲಕ ಮಂಜುನಾಥ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT