ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 318 ಹೊಸ ಪ್ರಕರಣ, 278 ಮಂದಿ ಗುಣಮುಖ

Last Updated 5 ಜೂನ್ 2021, 5:51 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 318 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 278 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಗುರುವಾರ ಸಂಜೆ ಆರು ಗಂಟೆಯಿಂದ ಶುಕ್ರವಾರ ಸಂಜೆ ಆರು ಗಂಟೆಯವರೆಗಿನ ಅವಧಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಈ ಪೈಕಿ ಮೂವರು ಕೋವಿಡ್‌ಯೇತರ ಕಾರಣಕ್ಕೆ ನಿಧನರಾಗಿದ್ದಾರೆ.

ಹೋಂ ಐಸೊಲೇಷನ್‌ನಲ್ಲಿ 199 ಮಂದಿ: ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,875ಕ್ಕೆ ಏರಿದೆ. ಐಸಿಯುನಲ್ಲಿ 58 ಮಂದಿ ಇದ್ದಾರೆ. ಈ ಮಧ್ಯೆ, ಸೋಂಕಿತರನ್ನು ಹೋಂ ಐಸೊಲೇಷನ್‌ಗೆ ಕಳುಹಿಸಬಾರದು ಎಂದು ಜಿಲ್ಲಾಡಳಿತ ತೀರ್ಮಾನ ಮಾಡಿದ ನಂತರ ಹೋಂ ಐಸೊಲೇಷನ್‌ನಲ್ಲಿರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮನೆಗಳಲ್ಲಿ ಸೌಲಭ್ಯಗಳು ಇದ್ದರಷ್ಟೇ ವೈದ್ಯರು ಹೋಂ ಐಸೊಲೇಷನ್‌ ಸಲಹೆ ಮಾಡುತ್ತಾರೆ. ಶುಕ್ರವಾರ 12 ಜನರನ್ನು ಮಾತ್ರ ಹೋಂ ಐಸೊಲೇಷನ್‌ಗೆ ಕಳುಹಿಸಲಾಗಿದೆ.ಜಿಲ್ಲೆಯಲ್ಲಿರುವ 2,875 ಸೋಂಕಿತರಲ್ಲಿ 199 ಮಂದಿಯಷ್ಟೇ ಮನೆ ಆರೈಕೆಯಲ್ಲಿದ್ದಾರೆ.

ಶುಕ್ರವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 27,730ಕ್ಕೆ ಏರಿದೆ. ಸೋಂಕುಮುಕ್ತರ ಸಂಖ್ಯೆ24,397ಕ್ಕೆ ಹಿಗ್ಗಿದೆ.

ಶುಕ್ರವಾರ 1,206 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 930 ವರದಿಗಳು ನೆಗೆಟಿವ್‌ ಆಗಿ, 276 ಪ್ರಕರಣಗಳು ದೃಢಪಟ್ಟಿವೆ. ಹಳೆಯ 42 ಪ್ರಕರಣಗಳು ಸೇರಿದಂತೆ ಒಟ್ಟು 318 ಪ್ರಕರಣಗಳ ಲೆಕ್ಕವನ್ನು ಜಿಲ್ಲಾಡಳಿತ ನೀಡಿದೆ.

ದೃಢಪಟ್ಟ ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 85, ಗುಂಡ್ಲುಪೇಟೆಯ 87, ಕೊಳ್ಳೇಗಾಲದ 57, ಹನೂರಿನ70 ಮತ್ತು ಯಳಂದೂರು ತಾಲ್ಲೂಕಿನ 19 ಪ್ರಕರಣಗಳು ಸೇರಿವೆ.

ಶುಕ್ರವಾರ ಗುಣಮುಖರಾದ 278 ಮಂದಿಯಲ್ಲಿ ಇಬ್ಬರು ಆಸ್ಪತ್ರೆಯಲ್ಲಿದ್ದರು. 84 ಮಂದಿ ಕೋವಿಡ್‌ ಕೇರ್‌ ಕೇಂದ್ರ ಹಾಗೂ 192 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT