ಯಳಂದೂರು: ತಾಲ್ಲೂಕಿನ ಯರಿಯೂರು ಗ್ರಾಮದ ಒಳಗೆರೆ ಮಾರಮ್ಮ ದೇವಸ್ಥಾನದಲ್ಲಿ ಅಂದಾಜು ₹ 6 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹಣವನ್ನು ಕಳ್ಳರು ದೋಚಿದ್ದಾರೆ.

ಮಂಗಳವಾರ ವಿಶೇಷ ಪೂಜೆಗಾಗಿ ದೇವಾಲಯದ ಬಾಗಿಲು ತೆರೆದಾಗ ಕಳುವಾಗಿರುವುದು ಗೊತ್ತಾಗಿದೆ.

ಪ್ರತಿ ಮಂಗಳವಾರ ದೇವಳದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೆಳಿಗ್ಗೆ ದೇವಸ್ಥಾನ ಶುಚಿಗೊಳಿಸಲು ಬಾಗಿಲು ತೆರೆದಾಗ ಕಳುವಾಗಿರುವುದು ತಿಳಿದಿದೆ. ಕಳ್ಳರು ಕೆಸ್ತೂರು ರಸ್ತೆಯಲ್ಲಿ ಖಾಲಿಯಾದ ಕಾಣಿಕೆ ಹುಂಡಿಯನ್ನು ಎಸೆದಿದ್ದಾರೆ ಎಂದು ಯಾಜಮಾನರಾದ ಶೀನಿವಾಸ್, ಮಹದೇವ, ಮುಖಂಡರಾದ ಕುಮಾರ್, ಸಿದ್ಧರಾಜು ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕು ಕಚೇರಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.