ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಭಾಗ್ಯಕ್ಕೆ ಕಾದು ಕುಳಿತ ಜನರು!

ಯಳಂದೂರು ಪಟ್ಟಣದ 1ನೇ ವಾರ್ಡ್‌ ಆಶ್ರಯ ಬಡಾವಣೆಯ ಸ್ಥಿತಿ
Last Updated 30 ಜನವರಿ 2017, 8:50 IST
ಅಕ್ಷರ ಗಾತ್ರ
ಯಳಂದೂರು: ಪಟ್ಟಣದ 1ನೇ ವಾರ್ಡ್‌ಗೆ ಒಳಪಡುವ ಆಶ್ರಯ ಬಡಾವಣೆಯಲ್ಲಿ ಖಾಲಿ ನಿವೇಶನಗಳನ್ನು ವಿತರಿಸಿ ದಶಕ ಉರುಳಿದೆ. ಆದರೆ, ಇಲ್ಲಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ.
 
ಕಳೆದ ವರ್ಷ ನಗರೋತ್ಥಾನ ಯೋಜನೆಯಡಿಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ ಇಲ್ಲಿಗೆ ಚರಂಡಿ ಹಾಗೂ ರಸ್ತೆಯನ್ನು ನಿರ್ಮಿಸ ಲಾಗಿದೆ. ಆದರೆ,  ಕಳಪೆ ಗುಣಮಟ್ಟವನ್ನು ಇವು ಹೆಜ್ಜೆ ಹೆಜ್ಜೆಗೂ ಸಾರುತ್ತಲಿವೆ.  ಇಲ್ಲಿ ಉದ್ಯಾನ ನಿರ್ಮಿಸಲು ಸ್ಥಳವನ್ನು ಮೀಸಲಿಟ್ಟು, ಫೆನ್ಸಿಂಗ್ ಕೂಡ ಹಾಕಲಾಗಿದೆ. 
 
ಕುಡಿಯುವ ನೀರಿನ ತೊಂಬೆಯೂ ಇದೆ. ಆದರೆ ತೊಂಬೆಗೆ ಇನ್ನೂ ನೀರು ಕಂಡಿಲ್ಲ.  ಉದ್ಯಾನದ ತುಂಬೆಲ್ಲಾ ಮುಳ್ಳಿನ ಪೊದೆಗಳದ್ದೇ ಬೆಳೆ. ಕಬ್ಬಿಣದ ತಂತಿಯ ಸುತ್ತುಗೋಡೆಗೆ ಹಂಬುಗಳು ಆವರಿಸಿವೆ. 
 
ಇಲ್ಲಿಗೆ ವಿದ್ಯುತ್ ಕಂಬಗಳನ್ನು ಅಳ ವಡಿಸಲು ಗುತ್ತಿಗೆ ನೀಡಿ ವರ್ಷ ಕಳೆದರೂ ಕಂಬಗಳು ಇವೆ. ಆದರೆ, ವಿದ್ಯುತ್ ತಂತಿಯ ಸಂಪರ್ಕ ಕಲ್ಪಿಸಿಲ್ಲ. ಚರಂಡಿಗಳ ನಿರ್ಮಿಸುವಲ್ಲೂ ಯೋಜನೆ ರೂಪಿಸಿಲ್ಲ. ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ ಎಂಬುದು ಇಲ್ಲಿನ ನಿವಾಸಿಗಳಾದ ಮನು, ಮಹಾದೇವಮ್ಮ  ಅವರ ದೂರು.
 
ಪಟ್ಟಣದಲ್ಲಿ ಖಾಲಿ ನಿವೇಶನಗಳಿಗೆ ತೊಂದರೆ ಇದೆ. ರಾಷ್ಟ್ರೀಯ ಹೆದ್ದಾರಿ 209 ರ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಮನೆ ಕಳೆದುಕೊಂಡ ಕೆಲ ನಿವಾಸಿಗಳಿಗೆ 20x30 ಅಳತೆಯ 38 ಖಾಲಿ ನಿವೇಶನ ಗಳನ್ನು ನೀಡಲು ಪಟ್ಟಣ ಪಂಚಾಯಿತಿ ತೀರ್ಮಾನಿಸಿದೆ. ಕೆಲಸ ಪ್ರಗತಿಯಲ್ಲಿದೆ. ಪಟ್ಟಣ ಪಂಚಾಯಿತಿ ಕಚೇರಿಯ ನೂತನ ಕಟ್ಟಡ ಕಾಮಗಾರಿಯೂ ನಡೆಯುತ್ತಿದೆ. ಜೊತೆಗೆ. ಇಲ್ಲಿನ ಸಿಬ್ಬಂದಿಗೆ ವಸತಿ ಗೃಹ ಗಳೂ ಇವೆ.  ಆದರೆ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಂಚಾಯಿತಿ ಚುರುಕಾಗಿಲ್ಲ ಎಂಬುದು ಇಲ್ಲಿನ ನಾಗರಿಕರ ದೂರಾಗಿದೆ.
 
**
ಅಭಿವೃದ್ಧಿಗೆ ಕ್ರಮ
ಯಳಂದೂರು: ಇಲ್ಲಿನ ಉದ್ಯಾನದಲ್ಲೇ ಓವರ್‌ಹೆಡ್‌ ಟ್ಯಾಂಕ್ ನಿರ್ಮಾಣ ಮಾಡಿ ಬಡಾವಣೆಗೆ ಪೂರೈಸಲು ಆಸ್ಥೆ ವಹಿಸಲಾಗುವುದು. ನಗರೋತ್ಥಾನ ಯೋಜನೆಯಡಿ ಪಟ್ಟಣದ ಅಭಿವೃದ್ಧಿಗೆ ₹ 2 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಟ್ಯಾಂಕ್‌ಗೆ ₹1 ಕೋಟಿ ಹಾಗೂ ಉಳಿದ ಹಣವನ್ನು ಇತರೆ ಕೆಲಸಗಳಿಗೆ ಮೀಸಲಾಗಿಟ್ಟಿದೆ. ವಿದ್ಯುತ್ ಕಂಬಗಳಿಗೆ ಸಂಪರ್ಕ. ಚರಂಡಿ ಹಾಗೂ ರಸ್ತೆಯ ಜೊತೆ ಉಳಿದ ಕಾಮಗಾರಿಯನ್ನೂ ಆದಷ್ಟು ಬೇಗ ಪೂರೈಸ ಲಾಗುವುದು ಎಂದು ಮುಖ್ಯಾಧಿ ಕಾರಿ ಎಸ್. ಉಮಾಶಂಕರ್ ಪ್ರಜಾವಾಣಿಗೆ ತಿಳಿಸಿದರು.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT