ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠ, ಏಡ್ಸ್ ಪೀಡಿತರಿಗೆ ಅಂತ್ಯೋದಯ ಚೀಟಿ

Last Updated 9 ಜನವರಿ 2011, 6:45 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಏಡ್ಸ್/ಎಚ್‌ಐವಿ ಸೋಂಕಿತರು ಹಾಗೂ ಕುಷ್ಠ ರೋಗಿಗಳಿಗೆ ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿ ವಿತರಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ಸಮಾಜದಲ್ಲಿ ಈ ರೋಗ ಪೀಡಿತರು ತೊಂದರೆ ಅನುಭವಿಸುವುದು ಹೆಚ್ಚು. ಆದರೆ, ರೋಗಿಗಳೇ ಹಿಂಜರಿಕೆ ತಳೆಯುತ್ತಿರುವ ಪರಿಣಾಮ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಡಿ ಪಡಿತರ ಚೀಟಿ ವಿತರಣೆಗೆ ಹಿನ್ನಡೆಯಾಗಿದೆ.

ರೋಗಿಗಳು ಸ್ವಯಂ ಪ್ರೇರಿತರಾಗಿ ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ. ಸ್ವಯಂಸೇವಾ ಸಂಸ್ಥೆಗಳು ಕೂಡ ಸಮರ್ಪಕ ಮಾಹಿತಿ ನೀಡು ತ್ತಿಲ್ಲ. ರೋಗ ಪೀಡಿತರೇ ಆಸಕ್ತಿ ತೋರುತ್ತಿ ಲ್ಲವೆಂಬ ಕಾರಣವನ್ನು ಎನ್‌ಜಿಒ ಪ್ರತಿನಿಧಿಗಳು ಆಹಾರ ಇಲಾಖೆಯ ಮುಂದಿಡುತ್ತಿದ್ದಾರೆ.

ರಾಜ್ಯದಲ್ಲಿ 2005ರಿಂದ 2010ರವರೆಗೆ ಗುರುತಿಸಲ್ಪಟ್ಟಿರುವ ಕುಷ್ಠ ರೋಗಿಗಳ ಸಂಖ್ಯೆ 20,446. ಎಚ್‌ಐವಿ ಸೋಂಕಿತರ ಸಂಖ್ಯೆ 2.25 ಲಕ್ಷದಷ್ಟಿದೆ. ಇವರಲ್ಲಿ ಬಿಪಿಎಲ್ ಚೀಟಿ ಪಡೆದವರನ್ನು ಗುರುತಿಸಿ ಅಂತ್ಯೋದಯ ಚೀಟಿ ವಿತರಿಸಬೇಕೆಂಬುದು ಸರ್ಕಾರದ ಸೂಚನೆ.

ಎಲ್ಲಾ ಜಿಲ್ಲೆಗಳ ಆಹಾರ ಇಲಾಖೆಯ ಉಪ ನಿರ್ದೇಶಕರು ಸಂಬಂಧಪಟ್ಟ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿವಾರಣಾಧಿ ಕಾರಿಯಿಂದ ರೋಗಿಗಳ ಮಾಹಿತಿ ಪಡೆದು ಪಡಿತರ ಕಾರ್ಡ್ ವಿತರಿಸುವಂತೆ ಆಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸೂಚಿಸಿ ್ದದಾರೆ. ಪ್ರತಿ ತಿಂಗಳು ಪಡಿತರ ಚೀಟಿ ವಿತರಿಸಿ ರುವ ಬಗ್ಗೆ ಮಾಹಿತಿ ನೀಡುವಂತೆಯೂ ತಿಳಿಸಿದ್ದಾರೆ.

ಜತೆಗೆ, ಏಡ್ಸ್/ಎಚ್‌ಐವಿ ಸೋಂಕಿತರ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದು ಅಂತ್ಯೋದಯ ಪಡಿತರ ಚೀಟಿ ನೀಡಬೇಕಿದೆ. ಈ ರೋಗ ಪೀಡಿತರ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳಿಂದಲೂ ಮಾಹಿತಿ ಪಡೆದು ಚೀಟಿ ವಿತರಿಸಲು ಅವಕಾಶವಿದೆ. ಜತೆಗೆ, ಯಾವುದೇ ರೋಗಿ ನೇರವಾಗಿ ಆಹಾರ ಇಲಾಖೆಗೆ ಬಿಪಿಎಲ್ ಚೀಟಿ ಬದಲಾಯಿಸಿ ಕೊಡಲು ಅರ್ಜಿ ಸಲ್ಲಿಸಬಹುದು. ಆದರೆ, ರೋಗಪೀಡಿತರು ಮಾತ್ರ ಆಸಕ್ತಿ ತೋರುತ್ತಿ ಲ್ಲವೆಂಬುದು ಅಧಿಕಾರಿಗಳ ಹೇಳಿಕೆ.

ಈ ಸೌಲಭ್ಯ ಎಪಿಎಲ್ ಪಟ್ಟಿಯಲ್ಲಿರುವ ರೋಗಿಗಳಿಗೆ ಸಿಗುವುದಿಲ್ಲ. ಕೇವಲ ಬಿಪಿಎಲ್ ಚೀಟಿ ಹೊಂದಿದವರಿಗೆ ಮಾತ್ರ ಸೀಮಿತ ಗೊಳಿಸಲಾಗಿದೆ. ಪ್ರಸ್ತುತ ಈ ಪಡಿತರ ಚೀಟಿ ಪಡೆದ ಫಲಾನುಭವಿಗಳಿಗೆ ಯೂನಿಟ್‌ವಾರು ಆಹಾರ ಪದಾರ್ಥ ನಿಗದಿಗೊಳಿಸಲಾಗಿದೆ. ಅಂತ್ಯೋದಯ ಚೀಟಿ ಪಡೆದರೆ 29 ಕೆಜಿ ಅಕ್ಕಿ ಹಾಗೂ 6 ಕೆಜಿ ಗೋಧಿ ಲಭಿಸಲಿದೆ.

‘ಜಿಲ್ಲೆಯಲ್ಲಿ ಕುಷ್ಠ ರೋಗಿಗಳು, ಏಡ್ಸ್/ ಎಚ್‌ಐವಿ ಸೋಂಕಿತರಿಗೆ ಅಂತ್ಯೋದಯ ಚೀಟಿ ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ 70 ಕುಷ್ಠ ರೋಗಿಗಳು ಮತ್ತು 43 ಎಚ್‌ಐವಿ ಸೋಂಕಿ ತರಿಗೆ ಕಾರ್ಡ್ ವಿತರಿಸಲಾಗಿದೆ. ರೋಗಿಗಳ ಪಟ್ಟಿ ನೀಡುವಂತೆ ಸ್ವಯಂಸೇವಾ ಸಂಸ್ಥೆಗಳಿಗೆ ತಿಳಿಸಲಾಗಿದೆ.

ಇಲಾಖೆಗೆ ನೇರವಾಗಿ ಬಂದು ಸಂಪರ್ಕಿಸಿದವರಿಗೂ ಸೌಲಭ್ಯ ಕಲ್ಪಿಸಲಾ ಗುತ್ತಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಇ. ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT