ಬುಧವಾರ, ಜೂನ್ 29, 2022
23 °C
ಎರಡು ಗ್ರಾಮ ಪಂಚಾಯಿತಿ, 39 ವಾರ್ಡ್‌ಗಳಲ್ಲಿ ಕೊರೊನಾ ಇಲ್ಲ: ಜಿಲ್ಲಾಧಿಕಾರಿ ಆರ್.ಲತಾ

1,126 ಗ್ರಾಮಗಳು ಸೋಂಕು ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳು, 1,126 ಗ್ರಾಮಗಳು ಮತ್ತು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿನ 6 ಸ್ಥಳೀಯ ಸಂಸ್ಥೆಗಳ 39 ವಾರ್ಡ್‌ಗಳು ಕೊರೊನಾ ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಡದಲಮರಿ ಗ್ರಾಮ ಪಂಚಾಯತಿಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದು, ಈಗಾಗಲೇ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿಯಾಗಿದೆ. ಇದೀಗ ಹೊಸದಾಗಿ ಗೌರಿಬಿದನೂರು ತಾಲ್ಲೂಕಿನ ಮುದಲೋಡು ಗ್ರಾಮ ಪಂಚಾಯ್ತಿಯು ಈ ಪಟ್ಟಿಗೆ ಸೇರ್ಪಡೆಯಾಗಿದೆ.

ಚಿಕ್ಕಬಳ್ಳಾಪುರ-23, ಚಿಂತಾಮಣಿ -35, ಶಿಡ್ಲಘಟ್ಟ -28, ಬಾಗೇಪಲ್ಲಿ-25, ಗುಡಿಬಂಡೆ-8, ಗೌರಿಬಿದನೂರು-38 ಗ್ರಾಮಗಳು ಸೇರಿದಂತೆ
ಒಟ್ಟಾರೆ ಈ ತಾಲ್ಲೂಕುಗಳ 1,126 ಗ್ರಾಮಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಅಲ್ಲದೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆ ಹಾಗೂ ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಟ್ಟು 39 ವಾರ್ಡ್‌ಗಳು ಕೊರೊನಾ ಮುಕ್ತವಾಗಿವೆ ಎಂದರು.

ಶಿಡ್ಲಘಟ್ಟದಲ್ಲಿ 19 ವಾರ್ಡ್ ಕೊರೊನಾ ಮುಕ್ತ: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ ಗಳಿದ್ದು, ಈ ಪೈಕಿ 1, 5, 6, 7, 8, 9, 10, 12, 13, 14, 16, 17, 18, 19, 21, 22, 24, 28, 29 ಒಳಗೊಂಡಂತೆ 19 ವಾರ್ಡ್‌ಗಳು ಕೊರೊನಾ ಮುಕ್ತವಾಗಿದೆ.

ಗೌರಿಬಿದನೂರು ನಗರಸಭೆ (4, 9, 10, 16, 27) ಮತ್ತು ಬಾಗೇಪಲ್ಲಿ ಪುರಸಭೆ (4, 10, 12, 17, 19) ಯಲ್ಲಿ ತಲಾ 5 ವಾರ್ಡ್‌ಗಳು ಸೋಂಕು ಮುಕ್ತವಾಗಿವೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 4 (3, 16, 19, 28) ವಾರ್ಡ್‌ಗಳಲ್ಲಿ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿದೆ. ಉಳಿದಂತೆ ಚಿಂತಾಮಣಿ ನಗರಸಭೆ (18, 26, 29) ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿಯ (4, 6, 10) ತಲಾ 3 ವಾರ್ಡ್‌ಗಳು ಸೋಂಕು ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಲಾಕ್‌ಡೌನ್ ಅಂತ್ಯದೊಳಗೆ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲಾ ಗ್ರಾ.ಪಂ ಗಳು ಮತ್ತು ನಗರ ಪ್ರದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳನ್ನು ಕೊರೊನಾ ಸೋಂಕು ಮುಕ್ತ ಮಾಡಲು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.