ಬುಧವಾರ, ಮಾರ್ಚ್ 3, 2021
30 °C
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿತರಣೆ

ಚಿಕ್ಕಬಳ್ಳಾಪುರ: 2ನೇ ಹಂತದಲ್ಲಿ 2,167 ಜನರಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ಆರಂಭ ಗೊಂಡ ಕೋವಿಡ್‌ ಲಸಿಕೆ ಹಾಕುವ ಎರಡನೇ ಹಂತದ ಅಭಿಯಾನದಲ್ಲಿ 2,167 ಫಲಾನುಭವಿಗಳಿಗೆ ಲಸಿಕೆ ಹಾಕಲಾಯಿತು.

ಬಾಗೇಪಲ್ಲಿಯ 6 ಕೇಂದ್ರಗಳಲ್ಲಿ 468 ಫಲಾನುಭವಿಗಳಿಗೆ, ಚಿಕ್ಕಬಳ್ಳಾಪುರದಲ್ಲಿ 7 ಕೇಂದ್ರಗಳಲ್ಲಿ 700 ಫಲಾನುಭವಿಗಳು, ಚಿಂತಾಮಣಿಯಲ್ಲಿ 6 ಕೇಂದ್ರದಲ್ಲಿ 600 ಫಲಾನುಭವಿಗಳು, ಗೌರಿಬಿದನೂರು 8 ಕೇಂದ್ರಗಳಲ್ಲಿ 584 ಫಲಾನುಭವಿಗಳು, ಗುಡಿಬಂಡೆಯಲ್ಲಿ 3 ಕೇಂದ್ರದಲ್ಲಿ 275 ಫಲಾನುಭವಿಗಳು, ಶಿಡ್ಲಘಟ್ಟದ 6 ಕೇಂದ್ರದಲ್ಲಿ 494 ಫಲಾನುಭವಿಗಳು ಸೇರಿ ಒಟ್ಟು 36 ಕೇಂದ್ರಗಳಲ್ಲಿ 3,121 ಫಲಾನುಭವಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.

ಆ ಪೈಕಿ 2,167 ಜನರು ಲಸಿಕೆ ಪಡೆದರು. ಇನ್ನುಳಿದವರಿಗೆ ಮಂಗಳವಾರ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 511 ಫಲಾನುಭವಿಗಳು ಲಸಿಕೆ ಪಡೆದಿದ್ದರು.

ಲಸಿಕೆ ಹಾಕಲು ಬಾಗೇಪಲ್ಲಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಮಾರ್ಗಾನುಕುಂಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಳೂರು ಸಮುದಾಯ ಆರೋಗ್ಯ ಕೇಂದ್ರ, ಚೇಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಾತಪಾಳ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಳ್ಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಚಿಂತಾಮಣಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಚಿನ್ನಸಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಇರಗಂಪಲ್ಲಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕುರುಬುರುವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಯಗವಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುತ್ತಿದೆ.

ಗೌರಿಬಿದನೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಲ್ಕಾಪುರ, ಮಂಚೇನಹಳ್ಳಿ, ನಗರಗೆರೆ, ಗೆದರೆ, ನಾಮಗೊಂಡ್ಲು, ತೊಂಡೆ ಬಾವಿಯಲ್ಲಿರುವ ಪ್ರಾಥ ಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಗುಡಿ ಬಂಡೆಯಲ್ಲಿ ಬೀಚಗಾನಹಳ್ಳಿ, ಹಂಪಸಂದ್ರ, ಯಲ್ಲೋಡು ಅಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಶಿಡ್ಲಘಟ್ಟದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಮ್ಮಾರಲಹಳ್ಳಿ, ಜಂಗಮಕೋಟೆ, ದಿಬ್ಬೂರಳ್ಳಿ, ಇ. ತಿಮ್ಮಸಂದ್ರ, ಮೇಲೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು