ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 2ನೇ ಹಂತದ ಅಭಿಯಾನ

3,121 ಫಲಾನುಭವಿಗಳಿಗೆ ಲಸಿಕೆ ಹಾಕುವ ಗುರಿ
Last Updated 18 ಜನವರಿ 2021, 1:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 511 ಫಲಾನುಭವಿಗಳಿಗೆ ಕೋವಿಡ್‌ ಲಸಿಕೆ ಹಾಕಿದ್ದು, ಸೋಮವಾರದಿಂದ ಎರಡನೇ ಹಂತದಲ್ಲಿ ಜಿಲ್ಲೆಯ 36 ಕೇಂದ್ರಗಳಲ್ಲಿ 3,121 ಫಲಾನುಭವಿಗಳಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಆರ್. ಲತಾ, ‘ಬಾಗೇಪಲ್ಲಿಯಲ್ಲಿ 6 ಕೇಂದ್ರಗಳಲ್ಲಿ 468 ಫಲಾನುಭವಿಗಳಿಗೆ, ಚಿಕ್ಕಬಳ್ಳಾಪುರದಲ್ಲಿ 7 ಕೇಂದ್ರಗಳಲ್ಲಿ 700 ಫಲಾನುಭವಿಗಳು, ಚಿಂತಾಮಣಿಯಲ್ಲಿ 6 ಕೇಂದ್ರ 600 ಫಲಾನುಭವಿಗಳು, ಗೌರಿಬಿದನೂರು 8 ಕೇಂದ್ರಗಳಲ್ಲಿ 584 ಫಲಾನುಭವಿಗಳು, ಗುಡಿಬಂಡೆಯಲ್ಲಿ 3 ಕೇಂದ್ರದಲ್ಲಿ 275 ಫಲಾನುಭವಿಗಳು, ಶಿಡ್ಲಘಟ್ಟದ 6 ಕೇಂದ್ರದಲ್ಲಿ 494 ಫಲಾನುಭವಿಗಳು ಸೇರಿ ಒಟ್ಟು 36 ಕೇಂದ್ರಗಳಲ್ಲಿ 3,121 ಫಲಾನುಭವಿಗಳಿಗೆ ಲಸಿಕೆ ಹಾಕುವ ಅಭಿಯಾನಹಮ್ಮಿಕೊಳ್ಳಲಾಗಿದೆ.

ಬಾಗೇಪಲ್ಲಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಮಾರ್ಗಾನುಕುಂಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಳೂರು ಸಮುದಾಯ ಆರೋಗ್ಯ ಕೇಂದ್ರ, ಚೇಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಾತಪಾಳ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಳ್ಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು.

ಚಿಂತಾಮಣಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಚಿನ್ನಸಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಇರಗಂಪಲ್ಲಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕುರುಬುರುವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಯಗವಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು.

ಗೌರಿಬಿದನೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಲ್ಕಾಪುರ, ಮಂಚೇನಹಳ್ಳಿ, ನಗರಗೆರೆ, ಗೆದರೆ, ನಾಮಗೊಂಡ್ಲು, ತೊಂಡೆ ಬಾವಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು.

ಗುಡಿಬಂಡೆಯಲ್ಲಿ ಬೀಚಗಾನಹಳ್ಳಿ, ಹಂಪಸಂದ್ರ, ಯಲ್ಲೋಡು ಅಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಶಿಡ್ಲಘಟ್ಟದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಮ್ಮಾರಲಹಳ್ಳಿ, ಜಂಗಮಕೋಟೆ, ದಿಬ್ಬೂರಳ್ಳಿ, ಇ. ತಿಮ್ಮಸಂದ್ರ, ಮೇಲೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT