ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023-24 ಸಾಲಿನ ದೂರ ಶಿಕ್ಷಣ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

Published 8 ಮೇ 2023, 12:28 IST
Last Updated 8 ಮೇ 2023, 12:28 IST
ಅಕ್ಷರ ಗಾತ್ರ

ಚಿಂತಾಮಣಿ: ಕೃಷಿ ವಿಶ್ವವಿದ್ಯಾನಿಲಯದ ಬೆಂಗಳೂರಿನ ವಿಸ್ತರಣಾ ನಿರ್ದೇಶನಾಲಯವು 2023-24 ಸಾಲಿನ ದೂರ ಶಿಕ್ಷಣ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಿದೆ. ಇದು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿರುತ್ತದೆ.

ಅರ್ಜಿ ಶುಲ್ಕ ರೂ.100/-, ಅರ್ಜಿಯನ್ನು ಜಿಕೆವಿಕೆ ದೂರ ಶಿಕ್ಷಣ ಘಟಕ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳಿಂದ ಅಥವಾ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ನಿಗದಿತ ಅರ್ಜಿ ಶುಲ್ಕ ಮತ್ತು ಕೋರ್ಸ್ ಶುಲ್ಕದೊಡನೆ ಭರ್ತಿ ಮಾಡಿದ ಅರ್ಜಿಗಳನ್ನು ಮೇ 11 ರೊಳಗೆ ಸಂಯೋಜಕರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಕೇಂದ್ರ, ಜಿಕೆವಿಕೆ, ಬೆಂಗಳೂರು-560 065 ಇವರಿಗೆ ಸಲ್ಲಿಸುವುದು. ಕೋರ್ಸ್, ಅರ್ಹತೆ, ಅವಧಿ ಮತ್ತು ಶುಲ್ಕಗಳ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ಚಿಂತಾಮಣಿ ಸಂಪರ್ಕಿಸಬಹುದು ಇವರಿಂದ ಅರ್ಜಿಯನ್ನು ಪಡೆಯಬಹುದು.


ಹೆಚ್ಚಿನ ಮಾಹಿತಿಗಾಗಿ ಡಾ. ಎಂ. ಪಾಪಿರೆಡ್ಡಿ-9449866930, ಡಾ. ತನ್ವೀರ್ ಅಹ್ಮದ್-9538221427, ಜಿ.ಆರ್. ಅರುಣಾ -9483537174 ಅವರನ್ನು ಸಂಪರ್ಕಿಸಬಹುದು ಎಂದು ನಗರದ ಕೃಷಿ ವಿಜ್ಞಾನ ಕೇಂದ್ರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT