ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಬಾದಾಮಿ ಹಾಲು

Last Updated 19 ಜುಲೈ 2021, 4:05 IST
ಅಕ್ಷರ ಗಾತ್ರ

ಚಿಂತಾಮಣಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯು ಭವಿಷ್ಯದ ಟರ್ನಿಂಗ್ ಪಾಯಿಂಟ್ ಆಗಿದ್ದು ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು. ಉತ್ಪಾದಕರ ಮತ್ತು ಗ್ರಾಹಕರ ಮಕ್ಕಳ ಆರೋಗ್ಯದ ರಕ್ಷಣೆಯೇ ಒಕ್ಕೂಟದ ಗುರಿಯಾಗಿದೆ ಎಂದು ಕೋಚಿಮುಲ್ ನಿರ್ದೇಶಕ ವೈ.ಬಿ. ಅಶ್ವತ್ಥನಾರಾಯಣಬಾಬು ತಿಳಿಸಿದರು.

ಸೋಮವಾರ ಮತ್ತು ಗುರುವಾರ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಮಕ್ಕಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಕೋಚಿಮುಲ್ ವತಿಯಿಂದ ₹ 1.04 ಲಕ್ಷ ಬೆಲೆ ಬಾಳುವ 5 ಸಾವಿರ ನಂದಿನಿ ಬಾದಾಮಿ ಹಾಲಿನ ಪ್ಯಾಕೆಟ್‌ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಭಾನುವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ರೈತರ ಮಕ್ಕಳು ದೊಡ್ಡಮಟ್ಟಕ್ಕೆ ಬೆಳೆದು ಅಧಿಕಾರಿಯಾಗಿ ರೈತರ ಪರ ಕೆಲಸ ನಿರ್ವಹಿಸಬೇಕು ಎಂಬುದು ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ ಅವರ ಆಶಯ. ಅವರ ಮಾರ್ಗದರ್ಶನದಲ್ಲಿ ಅನೇಕ ಸಮಾಜ ಸೇವಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಪರೀಕ್ಷೆ ಬರೆಯುವ ಮಕ್ಕಳಿಗೆ ಭಯ ಬೇಡ. ನಿಮ್ಮೊಂದಿಗೆ ಒಕ್ಕೂಟ ಇರುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶಗೌಡ ಮಾತನಾಡಿ, ಈಗಾಗಲೇ ಹಲವಾರು ಮಂದಿ ಪರೀಕ್ಷೆ ಬರೆಯುವ ಮಕ್ಕಳಿಗೆ ಬಿಸ್ಕತ್, ಮಾಸ್ಕ್, ನೀರಿನ ಬಾಟಲ್ ನೀಡಿದ್ದಾರೆ. ಅಶ್ವತ್ಥನಾರಾಯಣಬಾಬು ದೂರವಾಣಿ ಮೂಲಕ ಮಾತನಾಡಿ ಮಕ್ಕಳಿಗೆ ಬಾದಾಮಿ ಹಾಲಿನ ಪ್ಯಾಕೆಟ್ ನೀಡುವುದಾಗಿ ತಿಳಿಸಿದಾಗ ನನಗೆ ತುಂಬಾ ಸಂತೋಷವಾಯಿತು ಎಂದರು.

ಕೋಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಪಾಪೇಗೌಡ ಮಾತನಾಡಿದರು. ಪರೀಕ್ಷಾ ನೋಡಲ್ ಅಧಿಕಾರಿ ಡಿ.ಇ. ರಾಜಣ್ಣ, ನೌಕರರ ಸಂಘದ ಅಧ್ಯಕ್ಷ ಕೆಂಪರೆಡ್ಡಿ, ಕಾರ್ಯದರ್ಶಿಗಳಾದ ಡಿ.ಎನ್. ಲಕ್ಷ್ಮಿನಾರಾಯಣ್, ಎಲ್. ಗೋವಿಂದರೆಡ್ಡಿ, ಪಾಪಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT