ಬಾಗೇಪಲ್ಲಿ: ದೇಶದ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ತೆಗೆಯಬೇಕು ಎಂಬ ಬೇಡಿಕೆ ನೀಡಿದ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಇಲ್ಲಿನ ಸುಂದರಯ್ಯ ಭವನ, ಡಿವಿಜಿ ಮುಖ್ಯರಸ್ತೆಯಲ್ಲಿ ಬೈಕ್ ರ್ಯಾಲಿ ಮಾಡಿದರು.

ಸಿಪಿಐ (ಎಂ) ರಾಜ್ಯ ಸಮಿತಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ 50ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ತೆಗೆಯಬೇಕು ಎಂದಿದ್ದಾರೆ. ಆರ್ಎಸ್ಎಸ್ನ ಬೇಡಿಕೆಯು ಕೇವಲ ಪರಿಭಾಷೆಯ ವಿಷಯವಲ್ಲ. ಇದು ಸಂವಿಧಾನದ ಆಶಯದ ಮೇಲಿನ ನೇರ ದಾಳಿ. ಈ ಮೂಲಕ ದೇಶವನ್ನು ಧಾರ್ಮಿಕ ಶ್ರೇಷ್ಠತೆ, ಜಾತಿ ಶ್ರೇಣಿ ಮತ್ತು ಕಾರ್ಪೊರೇಟ್ ಸರ್ವಾಧಿಕಾರದ ಆಡಳಿತದ ಕಡೆಗೆ ಎಳೆಯುವ ಯತ್ನವಾಗಿದೆ’ ಎಂದರು.

ಬಿಜೆಪಿ ಮತ್ತು ಆರ್ಎಸ್ಎಸ್ ಅಂದಿನಿಂದ ಇಂದಿನವರೆಗೆ ಪ್ರಬಲ ಜಾತಿಗಳು ಮತ್ತು ಶ್ರೀಮಂತ ವರ್ಗಗಳ ಜೊತೆಗಿದೆ. ಅವರ ಕಾನೂನುಗಳು ಮತ್ತು ಹೇಳಿಕೆಗಳು ದೇಶದ ದುಡಿಯುವ ವರ್ಗಗಳ ಜನರ ವಿರುದ್ಧವೇ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿನ ಅವರ ಹೇಳಿಕೆಗಳು ಇದನ್ನು ಸಾಬೀತುಪಡಿಸಿದೆ. ಶೋಷಿತರು, ದುಡಿಯುವ ವರ್ಗ ಹಾಗೂ ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಯೋಜನೆ ಇದು ಎಂದರು.

ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್ ಮಾತನಾಡಿ, ಸಂವಿಧಾನವನ್ನು ಕುಗ್ಗಿಸುವ ಆರ್ಎಸ್ಎಸ್ನ ಹೇಳಿಕೆಗಳು ಮತ್ತು ಪ್ರಯತ್ನಗಳ ವಿರುದ್ಧ ದೇಶದಾದ್ಯಂತ ಒಗ್ಗಟ್ಟು ಪ್ರದರ್ಶಿಸಬೇಕು,. ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದದ ಮೂಲ ಮೌಲ್ಯಗಳನ್ನು ಅಳಿಸುವ ಆರ್ಎಸ್ಎಸ್ ಬೇಡಿಕೆಯನ್ನು ಜನರು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ಎಚ್.ಎ.ರಾಮಲಿಂಗಪ್ಪ, ಡಿ.ಟಿ.ಮುನಿಸ್ವಾಮಿ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ಮುಸ್ತಾಫ, ಕೆ.ಮುನಿಯಪ್ಪ, ರಾಮಾಂಜಿ, ನರಸಿಂಹರೆಡ್ಡಿ, ಅಬೂಬಕರ್, ರವಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.