ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ತಾಲ್ಲೂಕಿನೆಲ್ಲೆಡೆ ಮದ್ಯ ಅಕ್ರಮ ಮಾರಾಟ

Last Updated 15 ಜುಲೈ 2020, 17:10 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಆಂಧ್ರಪ್ರದೇಶದ ಗಡಿಭಾಗದ ಗ್ರಾಮಗಳಾದ ಮುಮ್ಮಡಿವಾರಿಪಲ್ಲಿ, ಕೊತ್ತಕೋಟೆ, ಗೊರ್ತಪಲ್ಲಿ, ಡಿ.ಕೊತ್ತಪಲ್ಲಿ ಬಳಿ ಗುಡಿಸಲುಗಳನ್ನೇ ಬಾರ್‌ಗಳಾಗಿ ಮಾಡಿಕೊಂಡು, ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಆದರೆ ಅಬಕಾರಿ, ಪೊಲೀಸ್ ಇಲಾಖೆ ಮೌನ ವಹಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೋವಿಡ್‌ ನಡುವೆಯೂ ಅಕ್ರಮ ಮದ್ಯ ಮಾರಾಟ ಜೋರಾಗಿ ಸಾಗುತ್ತಿದೆ. ರೈತರ ಹೊಲ, ಗದ್ದೆ, ತೋಟಗಳಲ್ಲಿ ತಾತ್ಕಾಲಿಕ ಗುಡಿಸಲು, ಶೆಡ್‌ ನಿರ್ಮಿಸಿಕೊಂಡು, ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನೂತನ ಮದ್ಯದಂಗಡಿ ತೆರೆಯಲು ಅವಕಾಶ ನೀಡುತ್ತಿಲ್ಲ. ಮದ್ಯದ ಬೆಲೆಯನ್ನು ದುಬಾರಿ ಮಾಡಿದ್ದಾರೆ. ಆಂಧ್ರಪ್ರದೇಶದ ಗೋರಂಟ್ಲ, ಓಡಿಸಿ, ಕದಿರಿ, ಕೊಡಿಕೊಂಡ, ಚಿಲಮತ್ತೂರು, ಹಿಂದೂಪೂರದಿಂದ ನಿತ್ಯ ಮದ್ಯಪ್ರಿಯರು ನೂರಾರು ಸಂಖ್ಯೆಯಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಗ್ರಾಮಗಳಿಗೆ ವಲಸೆ ಬಂದ ಯುವಕರು, ಬೈಕ್‌ನಲ್ಲಿ ಮದ್ಯ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಮಕ್ಕಳು ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಮಳೆಯರು ಭಾಗಿಯಾಗಿದ್ದಾರೆ.

ಆಂಧ್ರದ ಮದ್ಯಪ್ರಿಯರು ತಾಲ್ಲೂಕಿಗೆ ಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಸೋಂಕಿನ ಭೀತಿ ಹೆಚ್ಚಿದೆ. ನಗರ, ಗ್ರಾಮಗಳಲ್ಲಿ ಇರುವ ಮದ್ಯದಂಗಡಿಗಳಿಗೆ ರಾಜಕಾರಣಿಗಳು, ಪ್ರಭಾವಿಗಳ ರಕ್ಷಣೆಯಿದೆ ಎನ್ನುವುದು ಸ್ಥಳೀಯರ ಆರೋಪ.

‘ತಾಲ್ಲೂಕಿನ ಕೆಲ ರಾಜಕಾರಣಿಗಳ, ಜನಪ್ರತಿನಿಧಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮುಕ್ಕು ನೀಡುತ್ತಿದ್ದಾರೆ. ಚಿಲ್ಲರೆ ಅಂಗಡಿ, ಹೋಟೆಲ್‌ ಹಾಗೂ ಮನೆಗಳಲ್ಲಿ ಮದ್ಯ ಶೇಖರಿಸಿ ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ತಿಳಿದರೂ, ತಡೆಯಲು ಮುಂದಾಗುತ್ತಿಲ್ಲ’ ಎಂದು ದೇವಿಕುಂಟೆ ಶ್ರೀನಿವಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT