ಬಾಗೇಪಲ್ಲಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ–44ರ ನಾರೇಪಲ್ಲಿ ಟೋಲ್ ಪ್ಲಾಜಾದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಒಡಿಶಾದ ರಾಮ್ಬಾಬು ಕಿಂಚಿ ಮತ್ತು ಸಿಂಗನ ಹಂಟರ್ ಬಂಧಿತ ಆರೋಪಿಗಳು. ಅವರಲ್ಲಿ ಎರಡು ಬ್ಯಾಗ್ಗಳಲ್ಲಿದ್ದ ₹11 ಲಕ್ಷ ಮೌಲ್ಯದ 22 ಕೆ.ಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾರೇಪಲ್ಲಿ ಟೋಲ್ಪ್ಲಾಜಾ ಈ ಇಬ್ಬರು ಬ್ಯಾಗ್ನೊಂದಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಆರೋಪಿಗಳು ಓಡಲು ಯತ್ನಿಸಿದರು. ಈ ವೇಳೆ ಬೆನ್ನುಹತ್ತಿ ಅವರನ್ನು ಹಿಡಿಯಲಾಯಿತು. ವಿಚಾರಣೆ ನಡೆಸಿದಾಗ, ಆಂಧ್ರಪ್ರದೇಶದ ವಿಶಾಖಪಟ್ಟಣ ಬಳಿಯ ಅರುಕು ವ್ಯಾಲಿಯಿಂದ ಗಾಂಜಾ ತಂದು ಬಾಗೇಪಲ್ಲಿ, ಬೆಂಗಳೂರು, ಹಿಂದೂಪುರ ಸೇರಿದಂತೆ ಇತರೆಡೆ ಮಾರಾಟ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸಿ, ಹೆಚ್ಚುವರಿ ಪೊಲಿಸ್ ಅಧೀಕ್ಷಕ ಜಗನ್ನಾಥ್ ರೈ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಆರ್. ಪ್ರಕಾಶ್, ಬಾಗೇಪಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ಸಾರಥಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ಗಳಾದ ಸುನೀಲ್ಕುಮಾರ್, ಮುನಿರತ್ನಂ, ಪೊಲೀಸ್ ಕಾನ್ಸ್ಟೆಬಲ್ ಧನಂಜಯ್ಕುಮಾರ್, ಸಾಗರ್, ವೆಂಕಟಶಿವ, ನಾಗುರ್ಜುಣ, ಲಕ್ಷ್ಮಿಪತಿ, ಎಚ್.ಸಿ. ಕೃಷ್ಣಪ್ಪ, ರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.