ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: ಪಟ್ಟಣ, ಗ್ರಾಮಗಳಲ್ಲಿ ಬಕ್ರೀದ್ ಹಬ್ಬದ ಸಂಭ್ರಮ

ಪೂಜೆ
Published 17 ಜೂನ್ 2024, 14:26 IST
Last Updated 17 ಜೂನ್ 2024, 14:26 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಭಕ್ತಿ ಹಾಗೂ ತ್ಯಾಗ ಅನುಸಂಧಾನದ ಬಕ್ರೀದ್ (ಈದ್-ಉಲ್-ಅದಾ) ಹಬ್ಬದ ಪ್ರಯುಕ್ತ ಸೋಮವಾರ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶಗಳ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಜಾಮೀಯಾ, ಫಾರೂಕ್, ಕಮರ್, ನೂರಾನಿ, ಕೊತ್ತಪಲ್ಲಿ ರಸ್ತೆ ಮಸೀದಿ ಸೇರಿದಂತೆ 18 ಮಸೀದಿಗಳಿಂದ ಮೆರವಣಿಗೆ ಹೊರಟರು. ಬೆಳಿಗ್ಗೆ 8ಕ್ಕೆ ಹಮ್ಮಿಕೊಂಡಿದ್ದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಭಾಗಿಯಾದರು.

ತಾಲ್ಲೂಕಿನ ಪಾತಪಾಳ್ಯ, ಮಾರ್ಗಾನುಕುಂಟೆ, ಗೂಳೂರು, ಬಿಳ್ಳೂರು, ನಾರೇಮದ್ದೇಪಲ್ಲಿ, ಮಿಟ್ಟೇಮರಿ, ಜೂಲಪಾಳ್ಯ ದಿಗವನೆಟಕುಂಟಪಲಿ, ಯಗವನೆಟಕುಂಟಪಲ್ಲಿಯಲ್ಲಿ ಪ್ರಾರ್ಥನೆ ನಡೆಯಿತು.

ಪಟ್ಟಣದ ಫಾರೂಕ್ ಮಸೀದಿ ಧರ್ಮಗುರು ಹಜರತ್ ಮೌಲಾನಾ ರಿಯಾಜುದ್ದೀನ್ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರವಚನ ನೀಡಿದರು.

ವಿಶೇಷ ಪ್ರಾರ್ಥನೆ ಮುಗಿಸಿದ ಬಳಿಕ ಮುಸ್ಲಿಮರು ಖಬರಸ್ತಾನ್‌ದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಚಿಣ್ಣರು ಪರಸ್ಪರ ಈದ್ ಮುಭಾರಕ್ ಹಂಚಿಕೊಂಡರು.
ಚಿಣ್ಣರು ಪರಸ್ಪರ ಈದ್ ಮುಭಾರಕ್ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT