ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹನಾಜ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

Published 26 ಜನವರಿ 2024, 13:14 IST
Last Updated 26 ಜನವರಿ 2024, 13:14 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಹನಾಜ್ ಅವರಿಗೆ ಚಿತ್ರದುರ್ಗದಲ್ಲಿ ಜನವರಿ 23ರಂದು ನಡೆದ ರಾಜ್ಯ ಉರ್ದು ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನ ಹಾಗೂ ಫಾತೀಮಾ ಶೇಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ಶಹನಾಜ್ ಭಾಜನರಾಗಿದ್ದಾರೆ. ಪಟ್ಟಣದ ಪಿ.ಮಸ್ತಾನ್ ಖಾನ್ ಹಾಗೂ ಜಮೃತಬೀ ಅವರ ಮಗಳಾದ ಶಹನಾಜ್,ಪ್ರಸ್ತುತ ಪಾತಪಾಳ್ಯ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶೈಕ್ಷಣಿಕ ಸಮ್ಮೇಳನದಲ್ಲಿ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಜಬ್ಬಾರ್ ಸಾಹೇಬ್ ಹಾಗೂ ಗಣ್ಯರು ‍ಇದ್ದರು. ಶಹನಾಜ್ ಅವರಿಗೆ ಕ್ಷೇತ್ರಶಿಕ್ಷಣಾಧಿಕಾರಿ ತನುಜಾ ಹಾಗೂ ಕ್ಷೇತ್ರ ಸಂಪನ್ಮೂಲದ ತಾಲ್ಲೂಕು ಸಮನ್ವಾಧಿಕಾರಿ ಆರ್. ವೆಂಕಟರಾಮ್ ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಶಿಕ್ಷಕಿ ಶಹನಾಜ್ ರವರ ಭಾವಚಿತ್ರ
ಶಿಕ್ಷಕಿ ಶಹನಾಜ್ ರವರ ಭಾವಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT