ಸೋಮವಾರ, ನವೆಂಬರ್ 30, 2020
19 °C

ಅಲೀಪುರ: ಬಿಬಿ ಉಮ್ಮೆ ಕುಲ್ಸಮ್ ಜಯಂತ್ಯುತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನ ಅಲೀಪುರದಲ್ಲಿ ಶುಕ್ರವಾರ ಮಹಮದ್ ಪೈಗಂಬರ್ ಅವರ ಮೊಮ್ಮಗಳಾದ ಬಿಬಿ ಉಮ್ಮೆ ಕುಲ್ಸಮ್ ಅವರ ಜಯಂತ್ಯುತ್ಸವ ನಡೆಯಿತು.

ಮುಖಂಡ ಅಪ್ತಾಬ್ ಇ ನಿಜಾಮತ್ ನಾಟಿಕ್ ಅಲೀಪುರಿ ಮಾತನಾಡಿ, ‘ಪ್ರಾರ್ಥನೆ ಹಾಗೂ ಭಕ್ತಿಗೀತೆಗಳ ಮೂಲಕ ಇಸ್ಲಾಂ ಧರ್ಮದ ಏಳಿಗೆಗಾಗಿ ಬಿಬಿ ಉಮ್ಮೆ ಕುಲ್ಸಮ್ ಹೇಳಿದಂತೆ ನಡೆಯಬೇಕು. ಜಗತ್ತಿನಲ್ಲಿ ಮಾಡುವ ಪ್ರತಿ ಕಾರ್ಯವು ನ್ಯಾಯದಿಂದ ಕೂಡಿದ್ದರೆ ಅದಕ್ಕೆ ಎಂದಿಗೂ ಜಯವಿರುತ್ತದೆ. ಅನ್ಯಾಯಕ್ಕೆ ಅಪಜಯ ನಿಶ್ಚಿತ. ಅವರು ಮಾಡಿದ ತ್ಯಾಗ ಮತ್ತು ಜನಪರವಾದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು. 

ಧರ್ಮದ ಅಭಿವೃದ್ಧಿ, ಹಿನ್ನೆಲೆ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಮುಖಂಡ ಸಾದಿಕ್ ಅಲೀ ಕಾರ್ಯಕ್ರಮ ಆಯೋಜಿಸಿದ್ದರು. ಗ್ರಾಮಸ್ಥರು ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು.  ಅಂಜುಮನಿ‌ ಜಾಪ್ರಿಯಾದ ಅಧ್ಯಕ್ಷರಾದ ಹಾಸಿಮಿ ರಜಾ, ಗ್ರಾಮ ಪಂಚಾಯಿತಿ ಸದಸ್ಯ ಹರ್ಪತ್ ಹೈದರ್, ಮಹಮದ್ ಜಾಫರ್, ಮಹಮದ್ ರಫೀ, ಮಹಮದ್ ಹೈದರ್, ಖಾಯಿಂ ಅಲೀ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.