ಶುಕ್ರವಾರ, ಮಾರ್ಚ್ 5, 2021
30 °C

ಗೌರಿಬಿದನೂರು: ನಗರಸಭೆ ಸದಸ್ಯರ ಅಬ್ಬರದ ಪ್ರಚಾರ

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನಲ್ಲಿ ಗ್ರಾ.ಪಂ ಚುನಾವಣಾ ಕಾರ್ಯಗಳು ಬಿರುಸಿನಿಂದ ಪಡೆದುಕೊಂಡಿದ್ದು, ಗ್ರಾಮೀಣ ಭಾಗದಲ್ಲಿರುವ ಮತದಾರರ ಮನವೊಲಿಸಿ ತಮ್ಮ ಬೆಂಬಲಿಗರನ್ನು ಗೆಲುವಿನ ದಡ ಸೇರಿಸಲು ನಗರಸಭೆ ಸದಸ್ಯರು ಹಳ್ಳಿಗಳಿಗೆ ತೆರಳಿ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ನಗರದಲ್ಲಿ ಆಯ್ಕೆಯಾದ ನೂತನ ನಗರಸಭೆ ಸದಸ್ಯರು ಪಕ್ಷ ಹಾಗೂ ಬಣದ ವರಿಷ್ಠರ ಆಜ್ಞೆಯಂತೆ ನಿಗದಿತ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಮನೆಮನೆಯಲ್ಲಿ ಮತಯಾಚನೆ ಮಾಡಲು ಮುಂದಾಗಿದ್ದಾರೆ‌. ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೆ ಏರಲೇಬೇಕು ಎಂದು ನಿರ್ಧಾರವಾಗಿರುವ ಶಾಸಕರು ಮತ್ತು ಪುಟ್ಟಸ್ವಾಮಿಗೌಡ ಹೋಬಳೀವಾರು ಗ್ರಾ.ಪಂ ಗಳ ಜವಾಬ್ದಾರಿ ಒಪ್ಪಿಸಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿಸುತ್ತಿದ್ದಾರೆ.

ಹಳ್ಳಿಯಲ್ಲಿನ ಜನತೆ ಗ್ರಾ.ಪಂ ಚುನಾವಣೆಯ ಬಿಸಿಯಲ್ಲಿ ನಗರದಿಂದ ಸದಸ್ಯರು ಹಾಗೂ ಸಂಬಂಧಿಕರು ಮನೆಗೆ ಬರುತ್ತಾರೆಂಬ ಆಶಾಭಾವನೆಯಲ್ಲಿ ಕೆಲಸ ಕಾರ್ಯ ಬಿಟ್ಟು ಆತಿಥ್ಯ ಮಾಡಲು ಕಾಯುವಂತಾಗಿದೆ. ನಗರದಿಂದ ಬಂದಂತಹ ಸದಸ್ಯರಿಗೆ ತಿಂಡಿ, ಊಟ, ಕಾಫಿ ಟೀ ಸೇರಿದಂತೆ ‌ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.

‘ಸ್ಥಳೀಯ ಚುನಾವಣೆಗಳು ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಪರಿಯೊಂದಿಗೆ ಅವಲಂಬಿತವಾಗಿರುತ್ತದೆ. ಇದರಲ್ಲಿ ನಗರದಿಂದ ಸದಸ್ಯರಾಗಲಿ, ಸಿನಿಮಾ ನಟರಾಗಲೀ, ರಾಜಕೀಯ ಧುರೀಣರಾಗಲೀ, ಸೆಲೆಬ್ರಿಟಿ ಸ್ಟಾರ್ ಗಳು ಬಂದರೂ ಯಾವುದೇ ಪ್ರಯೋಜನವಿಲ್ಲ. ಜನನಾಯಕರ ಮನವೊಲಿಸಲು ನೆಪಮಾತ್ರಕ್ಕೆ ಪ್ರಚಾರಗಳಲ್ಲಿ ಭಾಗವಹಿಸಬಹುದಾಗಿದೆ’ ಎನ್ನುತ್ತಾರೆ ಹಳ್ಳಿಯ ಮುಖಂಡರೊಬ್ಬರು.

ಫೋಟೊ ಗೀಳು: ಗ್ರಾ.ಪಂ ಚುನಾವಣೆಯ ಅಂಗವಾಗಿ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಪಕ್ಷದ ಮುಖಂಡರಿಗೆ ಸಕಲ ಸೌಕರ್ಯಗಳನ್ನು ಒದಗಿಸಿ ಪಂಚಾಯಿತಿವಾರು ಹಳ್ಳಿಗಳಲ್ಲಿ ಪ್ರಚಾರ ಮಾಡುವಂತೆ ತಿಳಿಸಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಮುಖಂಡರು ತಮ್ಮ ಪ್ರಚಾರದ ವೈರಿಗಳನ್ನು ವಿವಿಧ ಭಂಗಿಗಳಲ್ಲಿ ಫೋಟೊ ತೆಗೆದು ವಾಟ್ಸ್‌ ಆ್ಯಪ್‌ ಮತ್ತು ಫೇಸ್‌ ಬುಕ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸಿಕೊಂಡು ಪ್ರತಿಷ್ಠೆ ಮೆರೆಯುತ್ತಿರುವುದು ವಿಶೇಷವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು