20ರ ನಂತರ ಸಮಸ್ಯೆ: ರಾಜ್ಯಮಟ್ಟದ ಸಮಸ್ಯೆ ಇದೆ. ತಿಂಗಳ 19ನೇ ತಾರೀಕಿನೊಳಗೆ ಸರ್ವರ್ ಸಮಸ್ಯೆ ಇರುವುದಿಲ್ಲ. 20ನೇ ತಾರೀಕಿನ ಮೇಲೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಸರಿಪಡಿಸುವ ಕೆಲಸವೂ ಆಗುತ್ತಿದೆ. ನಿಯಮ ಉಲ್ಲಂಘನೆಗೆ ಮಾಡಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿ ಡೀಲರ್‌ಗಳಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಪುಷ್ಪಾ ಆಹಾರ ನಿರೀಕ್ಷಕರು ಬಾಗೇಪಲ್ಲಿ
ದಿನವಿಡೀ ಕಾಯುವ ಸ್ಥಿತಿ: ನಿತ್ಯ ಕೂಲಿ ಮಾಡಿ ಜೀವನ ಸಾಗಿಸುವ ನಾವು ಸರ್ವರ್ ಸಮಸ್ಯೆಯಿಂದ ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ನಮಗೆ ಕೂಲಿ ಹಾಗೂ ಪಡಿತರ ಎರಡೂ ಇಲ್ಲದಾಗಿದೆ.