ಚಿಂತಾಮಣಿ: ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಸಮುದಾಯ ಭವನದಲ್ಲಿ 2009–10ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ವತಿಯಿಂದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.

ಶಿಕ್ಷಕ ಮಂಜುನಾಥ್ ಮಾತನಾಡಿ, ‘ಕಷ್ಟ ಬಂದಾಗ ಕೈ ಹಿಡಿಯುವ, ದುಃಖದಲ್ಲಿದ್ದಾಗ ಧೈರ್ಯ ತುಂಬುವ ವ್ಯಕ್ತಿಯನ್ನು ಸಂಪಾದನೆ ಮಾಡಿದರೆ ಅದುವೇ ಹಣಕ್ಕಿಂತ ದೊಡ್ಡ ಸಂಪಾದನೆ’ ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮನ್ನು ರೂಪಿಸಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿ ಗೌರವಿಸುತ್ತಾರೆ. ಇದು ಶಿಕ್ಷಕರ ತ್ಯಾಗ ಮತ್ತು ಮಾರ್ಗದರ್ಶನ ಸ್ಮರಿಸುವ ಒಂದು ಪವಿತ್ರ ಕಾರ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿ ಜೀವನಕ್ಕಷ್ಟೆ ಸೀಮಿತರಲ್ಲ. ನಾವು ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿದ್ದರೂ ವಿದ್ಯಾರ್ಥಿಗಳು ನಮ್ಮನ್ನು ಶಿಕ್ಷಕರೆಂದೇ ಸಂಭೋದಿಸುತ್ತಾರೆ. ಇದಕ್ಕಿಂತ ಮಿಗಿಲು ನಮಗೆ ಮತ್ತೇನಿದೆ ಎಂದರು.

ಅಂದಿನ ಶಿಕ್ಷಕರಾಗಿದ್ದ ಮಂಜುನಾಥ್, ಮಲ್ಲೇಗೌಡ, ಶಿವಾರೆಡ್ಡಿ, ಕೃಷ್ಣಮೂರ್ತಿ, ರಮೇಶ್, ಗಂಗಾಧರ, ಲೀಲಾವತಿ, ಉಷಾರಾಣಿ, ಶ್ರೀಧರ್, ತ್ಯಾಗರಾಜ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.