ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳೂರು: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Last Updated 6 ಫೆಬ್ರುವರಿ 2023, 6:14 IST
ಅಕ್ಷರ ಗಾತ್ರ

ಗೂಳೂರು(ಬಾಗೇಪಲ್ಲಿ): ಬಾಗೇಪಲ್ಲಿ ಕ್ಷೇತ್ರದ ಶಾಸಕರು ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿ ಮುಖಂಡರು, ಬಿಜೆಪಿಯಿಂದ ಆಯ್ಕೆಯಾದ ಸಂಸದ ಬಚ್ಚೇಗೌಡರು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಶ್ನಿಸಿದರು.

ತಾಲ್ಲೂಕಿನ ಗೂಳೂರು ಹೋಬಳಿಯ ಮಾಡಪ್ಪಲ್ಲಿ ಕ್ರಾಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾರ್ಗಾನುಕುಂಟೆ, ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಚುನಾವಣ ಸಂದರ್ಭದಲ್ಲಿ ಬಿಜೆಪಿ ನಾಯಕರು ಮತದಾರರನ್ನು ಧರ್ಮಸ್ಥಳ, ಓಂಶಕ್ತಿ, ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬಸ್ ವ್ಯವಸ್ಥೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾರ ಜೊತೆ ಮಾತನಾಡುವುದಿಲ್ಲ. ಕ್ಷೇತ್ರದ ಜನರೇ ತೀರ್ಪು ನೀಡಲಿ. ಕ್ಷೇತ್ರದ ಬಗ್ಗೆ ಗಂಧಗಾಳಿ ತಿಳಿಯದವರು ವಲಸೆ ಬಂದು ಕ್ಷೇತ್ರ ಖಾಲಿ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಅವರು ಮಾಡಿರುವ ಮಧ್ಯಾಹ್ನದ ಬಿಸಿಊಟ, ಇಂದಿರಾ ಕ್ಯಾಂಟಿನ್, ಶಾದಿ ಭಾಗ್ಯದಂತಹ ಯೋಜನೆಗಳು ಕಟ್ಟಕಡೆಯ ಪ್ರಜೆಗಳಿಗೆ ವರದಾನ ಆಗಿದೆ. ಇದರಂತೆ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ₹2 ಸಾವಿರ ಜಮಾ, 200 ಯುನಿಟ್ ಉಚಿತ ವಿದ್ಯುತ್ ಸೇರಿದಂತೆ ಕಾಂಗ್ರೆಸ್ ಅನೇಕ ಜನಪರ ಯೋಜನೆಗಳನ್ನು ಮಾಡಲಿದೆ ಎಂದರು.

ಪಕ್ಷೇತರ ಶಾಸಕರಾಗಿದ್ದ ಅವಧಿಯಲ್ಲಿ ಹಾಗೂ ಹಾಲಿ ಕಾಂಗ್ರೆಸ್ ಶಾಸಕನಾದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕಡಿಮೆ ಅನುದಾನ ನೀಡಿದೆ. ಇದರಿಂದ ಗೂಳೂರು ಹೋಬಳಿಯಲ್ಲಿನ ಕೆಲ ಗ್ರಾಮಗಳಿಗೆ ರಸ್ತೆಗಳ ಡಾಂಬರೀಕರಣ ಮಾಡಲು ಆಗಿಲ್ಲ. ಬಿಜೆಪಿ ಸರ್ಕಾರ ತಮ್ಮ ಪಕ್ಷದವರಿಗೆ ಹೆಚ್ಚಿನ ಅನುದಾನ ನೀಡಿ, ಕಾಂಗ್ರೆಸ್ ಶಾಸಕರಿಗೆ ಕಡಿಮೆ ಅನುದಾನ ನೀಡಿ ತಾರತಮ್ಯ ಮಾಡಿದೆ
ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಶಾಶ್ವತ ಕಾಮಗಾರಿಗಳನ್ನು ಮಾಡಲಾಗಿದೆ. ಮಾಡಪ್ಪಲ್ಲಿ, ಹೊನ್ನಂಪಲ್ಲಿ ಗ್ರಾಮಗಳ ಕಡೆ ಗ್ರಾನೈಟ್ ಮಾಡಲು ಈ ಸರ್ಕಾರ ಬೆಂಗಳೂರಿಗೆ ಅನುಮತಿ ನೀಡಲು ಮುಂದಾಗಿರುವುದು ಖಂಡನೀಯ. ರೈತರ ಜಮೀನುಗಳನ್ನು ಶ್ರೀಮಂತರು ಖರೀದಿ ಮಾಡಲು ಕಾನೂನು ತಂದಿದೆ. ಇದರಿಂದ ರೈತರ ಜಮೀನುಗಳನ್ನು ಮಾರಾಟ ಮಾಡದಂತೆ ನೋಡಬೇಕು ಎಂದು ಮನವಿ
ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಕೆ.ಆರ್.ನರೇಂದ್ರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ಎ.ಶ್ರೀನಿವಾಸ್, ಅಮರನಾಥರೆಡ್ಡಿ, ಶ್ರೀನಿವಾಸರೆಡ್ಡಿ, ಪ್ರಭಾಕರರೆಡ್ಡಿ, ಗುಡಿಬಂಡೆ ನಂಜುಂಡಪ್ಪ, ಮಾರ್ಗಾನುಕುಂಟೆ ಆನಂದ್, ರಾಮಕೃಷ್ಣಪ್ಪ, ವಕೀಲ ಜಯಪ್ಪ, ಗೂಳೂರುಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT