ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 135 ಕೋವಿಡ್ ಸೋಂಕಿತರು ಭಾನುವಾರ ಪತ್ತೆಯಾಗಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ 107 ಸೋಂಕು ಪ್ರಕರಣಗಳು ದೃಢವಾಗಿದ್ದವು. ಭಾನುವಾರ ಮತ್ತೆ 135 ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ ಸತತವಾಗಿ ಮೂರಂಕಿ ದಾಟಿದೆ. ಕೋವಿಡ್ ಸೋಂಕಿತರ ಸಂಖ್ಯೆ ಕೆಲವೇ ದಿನಗಳಲ್ಲಿ ಸಾವಿರ ಗಡಿ ದಾಟುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ
850ಕ್ಕೆ ತಲುಪಿದೆ.

ಹೊಸದಾಗಿ ಪತ್ತೆಯಾಗಿರುವ 135 ಹೊಸ ಪ್ರಕರಣಗಳ ಪೈಕಿ ಜಿಲ್ಲೆಯ ಬಾಗೇಪಲ್ಲಿಯಲ್ಲಿ 14, ಚಿಕ್ಕಬಳ್ಳಾಪುರದಲ್ಲಿ 33, ಚಿಂತಾಮಣಿಯಲ್ಲಿ 28, ಗುಡಿಬಂಡೆಯಲ್ಲಿ 6, ಶಿಡ್ಲಘಟ್ಟದಲ್ಲಿ 8 ಹಾಗೂ ಗೌರಿಬಿದನೂರಿನಲ್ಲಿ ಬರೋಬ್ಬರಿ 46 ಪ್ರಕರಣಗಳು
ಕಂಡು ಬಂದಿವೆ. ನಿತ್ಯ ಜಿಲ್ಲೆಯಲ್ಲಿ ಬೆರಳಣಿಕೆಷ್ಟು ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ ಈಗ ನೂರರ ಆಸುಪಾಸಿನಲ್ಲಿ ನಿತ್ಯ ಪತ್ತೆಯಾಗುತ್ತಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.