ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಸತತವಾಗಿ 3 ದಿನಗಳಿಂದ ಬಿದ್ದ ಭಾರಿ ಮಳೆಗೆ ತಾಲ್ಲೂಕಿನ ಕಮ್ಮರವಾರಿಪಲ್ಲಿ ಗ್ರಾಮದ ರೈತ ಮಹಿಳೆ ಕೆ.ಎನ್.ಈಶ್ವರಮ್ಮ, ರೈತ ಗೋವಿಂದಪ್ಪ ಬೆಳೆದ ಟೊಮೆಟೊ ಹಾಗೂ ಕ್ಯಾರೆಟ್ ಬೆಳೆ ಸಂಪೂರ್ಣ ನೆಲಕಚ್ಚಿದೆ.

ರೈತ ಮಹಿಳೆ ಈಶ್ವರಮ್ಮ, ರೈತ ಗೋವಿಂದಪ್ಪ 2 ಎಕರೆಯಲ್ಲಿ ಕ್ಯಾರೆಟ್ ಹಾಗೂ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಸತತ ಮಳೆಯಿಂದ ಹೊಲ ಗದ್ದೆಗಳಲ್ಲಿ ನೀರು ಸಂಗ್ರಹ ಆಗಿದೆ. ತೇವಾಂಶ ಆಗಿ ಕಟಾವು ಹಂತದ ಕ್ಯಾರೆಟ್ ನೆಲಕಚ್ಚಿದೆ. ಟೊಮೆಟೊ ಬೆಳೆಯು ಸಂಪೂರ್ಣವಾಗಿ ನೆಲಕ್ಕೆ ಕುಸಿದಿವೆ.

ಕೈಗೆ ಬಂದದ್ದು ಬಾಯಿಗೆ ಬರದಂತೆ ಆಗಿದೆ ಎಂದು ಪಿ.ಎನ್.ಈಶ್ವರಮ್ಮ ಪ್ರತಿಕ್ರಿಯಿಸಿದರು.

ಮಂಗಳವಾರವೂ ಸತತ ಮಳೆ:

ತಾಲ್ಲೂಕಿನ ಕಸಬಾ, ಮಿಟ್ಟೇಮರಿ, ಗೂಳೂರು ಹೋಬಳಿಗಳ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆ ಧಾರಾಕಾರ ಮಳೆ ಆಗಿದೆ. ಮಳೆ, ಚರಂಡಿಯ ನೀರು ರಸ್ತೆಗೆ ಹರಿಯಿತು. ಗ್ರಾಮೀಣ ರಸ್ತೆಗಳು ಕೆಸರುಮಯ ಆಗಿತ್ತು. ಬೀದಿಬದಿ ವ್ಯಾಪಾರಕ್ಕೆ ಹಾಗೂ ಜನರ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು.

ಪಟ್ಟಣದ ಮುಖ್ಯರಸ್ತೆ, ವಾಲ್ಮೀಕಿ, ಅಂಬೇಡ್ಕರ್ ನಗರ ಸೇರಿದಂತೆ ಬೀದಿಗಳ ರಸ್ತೆಗಳು, ತಗ್ಗಿನ ಪ್ರದೇಶಗಳು ಜಲಾವೃತಗೊಂಡವು. ಕಲುಷಿತ ಮಳೆಯ ನೀರು ಮನೆಗಳಿಗೆ ನುಗ್ಗಿದೆ. ಮಹಿಳೆಯರು, ಮಕ್ಕಳು ನೀರನ್ನು ಹೊರಗೆ ಹಾಕಲು ಪ್ರಯಾಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.