ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕೆಸರುಗದ್ದೆಯಾದ ಎಪಿಎಂಸಿ

Last Updated 10 ಅಕ್ಟೋಬರ್ 2021, 5:24 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ(ಎಪಿಎಂಸಿ) ಟೊಮೆಟೊ ಮಾರಾಟದ ಪ್ರದೇಶವು ಕೆಸರುಗದ್ದೆಯಾಗಿದೆ.

ಕಳೆದ 3 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಜ್ಜೆ ಇಡುವುದಕ್ಕೆ ಸಾಧ್ಯವಿಲ್ಲದಂತಾಗಿದೆ. ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ಲೋಡ್ ಟೊಮೆಟೊ ಮಾರಾಟಕ್ಕೆ ಬರುತ್ತದೆ. ಹರಾಜಿನ ನಂತರ ಹಣ್ಣನ್ನು ಮತ್ತೆ ಲಾರಿಗಳಿಗೆ ತುಂಬಿಕೊಂಡು ದೂರದ ರಾಜ್ಯಗಳಿಗೆ ರವಾನೆಯಾಗುತ್ತದೆ. ಕಳಪೆ ಹಾಗೂ ಬೇಡದ ಹಣ್ಣುಗಳನ್ನು ಅಂಗಡಿಗಳ ಮುಂದಿನ ಚರಂಡಿ, ರಸ್ತೆಯಲ್ಲಿ ಬಿಸಾಡುತ್ತಾರೆ. ಅದರ ಮೇಲೆ ವಾಹನಗಳು ಸಂಚರಿಸುತ್ತವೆ. ಜತೆಗೆ ಮಳೆ ಸುರಿಯುತ್ತಿರುವುದರಿಂದ ಕೊಚ್ಚೆಯ ರಾಡಿಯಾಗಿದೆ.

ಮಾರುಕಟ್ಟೆಯಲ್ಲಿ ದುರ್ವಾಸನೆ ಬಡಿಯುತ್ತದೆ. ವ್ಯಾಪಾರಿಗಳು, ರೈತರು, ಕೂಲಿಯಾಳುಗಳು, ಹಮಾಲಿಗಳು, ವಾಹನಗಳ ಚಾಲಕರು ಸಂಚರಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕದಲ್ಲಿದ್ದಾರೆ.

ಪ್ರತಿನಿತ್ಯ ವ್ಯರ್ಥವಾಗುವ ಹಣ್ಣುಗಳನ್ನು ಒಂದೆಡೆ ಶೇಖರಣೆ ಮಾಡುವ ವ್ಯವಸ್ಥೆ ಇಲ್ಲ. ರಸ್ತೆ, ಚರಂಡಿಗಳಲ್ಲಿ ಬಿಸಾಡುತ್ತಾರೆ. ವ್ಯರ್ಥ ಹಣ್ಣುಗಳನ್ನು ರಸ್ತೆ, ಚರಂಡಿಗಳಿಗೆ ಹಾಕದೆ ಕಡ್ಡಾಯವಾಗಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ರೈತ ಮುಖಂಡ ಸೀಕಲ್ ರಮಣಾರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT