ಭಾನುವಾರ, ಆಗಸ್ಟ್ 25, 2019
20 °C

ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ರವಾನೆ

Published:
Updated:
Prajavani

ಚಿಕ್ಕಬಳ್ಳಾಪುರ: ಪ್ರವಾಹ, ಪ್ರಕೃತಿ ವಿಕೋಪಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಜಿ.ಎಚ್.ಎನ್ ಫೌಂಡೇಶನ್ ವತಿಯಿಂದ ಬುಧವಾರ ಒಂದು ಕ್ಯಾಂಟರ್ ಲೋಡ್ ಅಕ್ಕಿ ಚೀಲ ಹಾಗೂ ಆಹಾರ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಚ್.ಎನ್ ಫೌಂಡೇಶನ್ ಸದಸ್ಯ ವಿನಯ್ ಶ್ಯಾಮ್, ‘ರಾಜ್ಯದ ಯಾವುದೇ ಭಾಗದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಆದ ಸಂದರ್ಭದಲ್ಲಿ ನಮ್ಮ ಫೌಂಡೇಶನ್ ವತಿಯಿಂದ ಸಹಾಯ ಮಾಡುತ್ತ ಬಂದಿದ್ದೇವೆ. ಶೀಘ್ರದಲ್ಲಿಯೇ ಟ್ರಸ್ಟ್ ವತಿಯಿಂದ ₹1.25 ಕೋಟಿ ಆರ್ಥಿಕ ನೆರವನ್ನು ಕೂಡ ನೀಡಲಾಗುತ್ತದೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಜಿ.ಎಚ್.ಎನ್ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ, ಆರೋಗ್ಯ ಶಿಬಿರ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರು, ದೀನದಲಿತರು, ಹಿಂದುಳಿದ, ಅಲ್ಪಸಂಖ್ಯಾತರ ಪರ ಕೆಲಸ ಮಾಡಲಾಗುತ್ತದೆ’ ಎಂದು ತಿಳಿಸಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಶೆಟ್ಟಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ವಿ.ಮುರಳಿ, ಯುವ ಮುಖಂಡರಾದ ಎಲ್.ಮಂಜುನಾಥ್, ಪಿ.ರಮೇಶ್, ಕಿರಣ್ ಹಾಜರಿದ್ದರು.

Post Comments (+)