ಮಳೆಗಾಗಿ ಹೆಣ್ಣು ಮಕ್ಕಳ ಮದುವೆ

6

ಮಳೆಗಾಗಿ ಹೆಣ್ಣು ಮಕ್ಕಳ ಮದುವೆ

Published:
Updated:
Deccan Herald

ಗುಡಿಬಂಡೆ: ಮಳೆರಾಯನಿಗಾಗಿ ಪ್ರಾರ್ಥಿಸಿ ತಾಲ್ಲೂಕಿನ ದಪ್ಪರ್ತಿ ಗ್ರಾಮಸ್ಥರು ಇತ್ತೀಚೆಗೆ ಹೆಣ್ಣು ಮಕ್ಕಳ ಮದುವೆ ಮಾಡಿದರು.

‌ಗ್ರಾಮದ ಮಧ್ಯದಲ್ಲಿ ಚಪ್ಪರ ಹಾಕಿ, ದೀಪಾಲಂಕಾರ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ವಧು- ವರರ ವೇಷ ತೊಡಿಸಿ ಅಣಕು ಮದುವೆ ಮಾಡಿ ಗ್ರಾಮಸ್ಥರಿಗೆಲ್ಲ ಭರ್ಜರಿ ಊಟ ಹಾಕಿದರು.

ಗ್ರಾಮದ ಹಿರಿಯರು ಊರ ಮಧ್ಯದಲ್ಲಿ ಮಣ್ಣಿನ ಮಳೆರಾಯನ ಮೂರ್ತಿಯನ್ನು ನಿರ್ಮಿಸಿ, ಕಾಗದ ಹೂವಿನಿಂದ ಅಲಂಕರಿಸಿ ಸೋಬಾನೆ ಪದಗಳ ಮೂಲಕ ಐದು ದಿನಗಳ ಕಾಲ ಪೂಜೆ ನಡಸಿದ್ದರು.

ಪೂಜೆ ನಂತರ ಮಳೆರಾಯನ ಮೂರ್ತಿಯನ್ನು ಒಬ್ಬರು ತಲೆ ಮೇಲೆ ಹೊತ್ತು ಊರಲ್ಲಿನ ಎಲ್ಲ ಹಾದಿ ಬೀದಿಗಳಲ್ಲೂ ಪ್ರಾರ್ಥಿಸಿಕೊಂಡು ತಿರುಗಾಡಿದರು. ಆಗ ಮನೆ ಮನೆಯ ಬಳಿಯೂ ಮಳೆರಾಯನ ಮೇಲೆ ಬಿಂದಿಗೆ ನೀರು ಹೊಯ್ದು ಅರಿಶಿಣ ಕುಂಕುಮ ಇಟ್ಟು ಪೂಜಿಸಿ ಅಕ್ಕಿ, ರಾಗಿ ಧವಸ ಧಾನ್ಯ ಕಾಣಿಕೆ ಕೊಟ್ಟು ಕಳುಹಿಸಿದರು. ಹೀಗೆ ಸಂಗ್ರಹವಾದ ಹಣದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !