ಶನಿವಾರ, ಏಪ್ರಿಲ್ 1, 2023
29 °C

ಊಟ, ವಸತಿಗೆ ಹಿರಿಯರ ಪರದಾಟ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದ ಡಾ.ಎಚ್.ಎನ್.ವೃತ್ತದ ಹೈಮಾಸ್ಟ್ ದೀಪದ ಬಳಿಯ ಪೊಲೀಸ್ ಚೌಕಿ ಮೂರು ಹಿರಿಯ ಜೀವಗಳಿಗೆ ಮನೆ ಎನ್ನುವಂತೆ ಆಗಿದೆ. 

ಹೌದು, ಚೌಕಿ ಪಕ್ಕದಲ್ಲಿ 70 ರಿಂದ 80 ವರ್ಷದ 3 ಮಂದಿ ಮಹಿಳೆಯರು ಊಟ, ವಸತಿ ಇ‌ಲ್ಲದೆ ನಿರಳುತ್ತ ಮಲಗಿದ್ದಾರೆ. ವಾಸ ಮಾಡಲು ಯೋಗ್ಯ ಸ್ಥಳ ಇಲ್ಲದೇ ರಸ್ತೆಯಲ್ಲಿಯೇ ನರಳುತ್ತಿದ್ದಾರೆ. ಮೈ ಮೇಲೆ ಕೊಳಕು ಬಟ್ಟೆಗಳು, ಚಳಿ, ಗಾಳಿ ಎನ್ನದೇ ಪೊಲೀಸ್ ಚೌಕಿ ಪಕ್ಕದಲ್ಲಿಯೇ ವಾಸ ಮಾಡುತ್ತಿದ್ದಾರೆ.

ಹಗಲಿನಲ್ಲಿ ರಸ್ತೆಯಲ್ಲಿ ನರಳುತ್ತ, ಕುಂಟುತ್ತಾ ಬೇಕರಿ, ಹೋಟೆಲ್‌, ಬೀದಿಬದಿ ವ್ಯಾಪಾರಸ್ಥರ, ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿದ್ದಾರೆ. ಕಾಡಿ ಬೇಡಿ ತಿಂಡಿ, ತಿನಿಸುಗಳನ್ನು ತಿನ್ನಲಾರದೇ, ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ.

ಪ್ರತಿನಿತ್ಯ ಇದೇ ವೃತ್ತದಲ್ಲಿ ತಾಲ್ಲೂಕು ಮಟ್ಟದ ಹಾಗೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿಯವರು, ಸಂಘ-ಸಂಸ್ಥೆಗಳವರು, ದಾನಿಗಳು, ಸಮಾಜ ಸೇವಕರು ಸೇರಿದಂತೆ ಸಾರ್ವಜನಿಕರು ಸಂಚರಿಸುತ್ತಾರೆ. ಆದರೆ ಹಿರಿಯ ಜೀವಗಳ ಕಡೆ ಎಂದಿಗೂ ನೋಡಿಲ್ಲ. ಕನಿಷ್ಠ ಊಟ, ವಸತಿ ಕಲ್ಪಿಸಿಲ್ಲ.

ಗಾಳಿ, ಚಳಿಗೆ ನಡುಗುತ್ತಿರುವ ಹಿರಿಯ ಜೀವಗಳಿಗೆ ವಾಸಿಸಲು ಯೋಗ್ಯವಾದ ಸ್ಥಳ, ಚಾಪೆ, ಹೊದಿಕೆಗಳು ಅಗತ್ಯವಾಗುವೆ. ಇವರ ಮನವೊಳಿಸಿ, ಅನಾಥಾಶ್ರಮಗಳಿಗೆ ಸೇರಿಸಿಬೇಕು. ರಸ್ತೆಯಲ್ಲಿ ವಿಲ ವಿಲ ಒದ್ದಾಡುವ ಜೀವಗಳಿಗೆ  ಆಸರೆ ಅಗತ್ಯ. ಚುನಾವಣಾ ಸಂಧರ್ಭದಲ್ಲಿ ಮತದಾರರನ್ನು ಓಲೈಸುತ್ತಿರುವ ಸಮಾಜ ಸೇವಕರು ಸಹ ಕನಿಷ್ಠ ಊಟ, ವಸತಿ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುವರು.

‌ಆರೋಗ್ಯದ ಸಮಸ್ಯೆಯಿಂದ ನರಳುವ ಹಿರಿಯ ಜೀವಗಳನ್ನು ಅಧಿಕಾರಿಗಳು, ಸಿಬ್ಬಂದಿಯವರು, ಜನಪ್ರತಿನಿಧಿಗಳು, ಸಮಾಜಸೇವಕರು ಆಸರೆ ಆಗಬೇಕು. ಇವರ ಮನವೊಳಿಸಿ ವೃದ್ದಾಶ್ರಮಕ್ಕೆ ಸೇರಿಸುವ ಕೆಲಸ ಆಗಬೇಕು ಎಂದು ನಿವೃತ್ತ ಶಿಕ್ಷಕ ಇಲಾಹಿಭಕ್ಷ್ ತಿಳಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.