ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕಾಡುಮಲ್ಲೇಶ್ವರ ಬೆಟ್ಟಕ್ಕೆ ಬೆಂಕಿ

Last Updated 14 ಫೆಬ್ರುವರಿ 2021, 2:48 IST
ಅಕ್ಷರ ಗಾತ್ರ

ಚಿಂತಾಮಣಿ: ನಗರ ಹೊರವಲಯದ ಕಾಡುಮಲ್ಲೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳು ಶನಿವಾರ ಬೆಂಕಿ ಹಾಕಿದ್ದು, ಬೆಂಕಿಯ ಕೆನ್ನಾಲಿಗೆಗೆ ಗಿಡ, ಮರಗಳು ಆಹುತಿಯಾಗಿವೆ.

ನಗರಕ್ಕೆ ಹೊಂದಿಕೊಂಡಿರುವ ಕಾಡುಮಲ್ಲೇಶ್ವರ ಬೆಟ್ಟ ಪ್ರವಾಸಿ ತಾಣವಾಗಿದೆ. ಬೆಟ್ಟಕ್ಕೆ ಮೆಟ್ಟಿಲುಗಳಿವೆ. ಬೆಟ್ಟದ ಮೇಲೆ ದೇವಾಲಯ, ಸಾಲುಮರದ ತಿಮ್ಮಕ್ಕ ವೃಕ್ಷೊದ್ಯಾನವಿದೆ. ಪ್ರತಿನಿತ್ಯ ನೂರಾರು ಜನರು ವಾಯುವಿಹಾರಕ್ಕೆ ತೆರಳುತ್ತಾರೆ. ಬೆಟ್ಟದ ಮೇಲಿಂದ ನಗರ ಸೌಂದರ್ಯವನ್ನು ಆರಾಧಿಸುತ್ತಾರೆ.

ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನದಲ್ಲಿ ಕಿಡಿಗೇಡಿಗಳು ಮದ್ಯಪಾನ, ಧೂಮಪಾನ ಮಾಡಲು ಗುಂಪುಗಳಲ್ಲಿ ತೆರಳುತ್ತಾರೆ. ಅಂತಹ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಪ್ರಾಣಿ, ಪಕ್ಷಿಗಳು ತುತ್ತಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆಟ್ಟ, ಗುಡ್ಡ, ಕಾಡುಗಳಿಗೆ ಬೆಂಕಿ ಬೀಳುವುದು ಸಾಮಾನ್ಯ. ಆದರೆ, ಚಳಿಗಾಲದಲ್ಲೇ ಬೆಟ್ಟದ ಗಿಡ, ಮರಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಆತಂಕದ ಸಂಗತಿ. ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನದಲ್ಲಿ ಯಾವುದೇ ಕಾವಲು ವ್ಯವಸ್ಥೆ ಇಲ್ಲದಿರುವುದು ಕಿಡಿಗೇಡಿಗಳಿಗೆ ಅವಕಾಶವಾಗಿದೆ. ಕಾವಲು ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT