ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಗುಡಿಪಲ್ಲಿಗೆ ಗಾಂಧಿಗ್ರಾಮ ಪುರಸ್ಕಾರ

ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಅನುಷ್ಠಾನಕ್ಕೆ ಪ್ರಶಸ್ತಿ
Last Updated 10 ಅಕ್ಟೋಬರ್ 2020, 2:48 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಹಾಗೂ ಉತ್ತಮ ಕಾರ್ಯಪ್ರಗತಿಗೆ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ಭಾಜನವಾಗಿದೆ.

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 21 ಪೈಕಿ, 9338 ಜನರು ಇದ್ದಾರೆ. ಇದರಲ್ಲಿ ಗಂಡು 4781, ಹೆಣ್ಣು 4557 ಮಂದಿ ಇದ್ದಾರೆ. 2264 ಕುಟುಂಬಗಳು ಇದೆ. ಕಿರಿಯ ಪ್ರಾಥಮಿಕ ಶಾಲೆಗಳು 15, ಹಿರಿಯ 4, ಪ್ರೌಢಶಾಲೆ 1, ಅಂಗನವಾಡಿ ಕೇಂದ್ರಗಳು 18, ಖಾಸಗಿ ಶಾಲೆಗಳು 2, ಪ್ರಾಥಮಿಕ ಆರೋಗ್ಯಕೇಂದ್ರ 1, ನ್ಯಾಯಬೆಲೆ ಅಂಗಡಿ 6, ಕೊಳವೆಬಾವಿಗಳು 29 ಇದೆ. 2019-20ನೇ ಸಾಲಿನಲ್ಲಿ ಕಂದಾಯ ಬೇಡಿಕೆ ₹33,401. ಪ್ರಸಕ್ತ ವರ್ಷದ ವಸೂಲಿ ₹6,47,816 ಆಗಿದ್ದು, ಶೇ 100ರಷ್ಟು ಸಾಧಿಸಿದೆ.

ಶಾಲಾ, ಅಂಗನವಾಡಿ ಮಕ್ಕಳಿಗೆ ಲಸಿಕೆ ಹಾಕಿಸಲಾಗಿದೆ. ದೇವರಗುಡಿಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರವನ್ನು ನಮ್ಮೂರ ಶಾಲೆ ಎಂದು ಮಾಡಲಾಗಿದೆ. ಶಾಲಾ ಮಕ್ಕಳನ್ನು ಕೈಬೀಸಿ ಕರೆಯುವಂತೆ ಬಣ್ಣದ ಚಿತ್ರಗಳು, ಮಾಹಿತಿಗಳನ್ನು ಚಿತ್ರಿಸಲಾಗಿದೆ. 4 ಕೃಷಿ ಹೊಂಡಗಳನ್ನು, 4 ಕಡೆ ಮಳೆ ನೀರು ಸಂಗ್ರಹ ಮಾಡಲಾಗಿದೆ.

ಕಂದಾಯ, ಕರ ವಸೂಲಿಯಲ್ಲಿ ಶೇ 92ರಷ್ಟು ಪ್ರಗತಿ ಸಾಧಿಸಿದೆ. 14ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿದ್ದ, ₹60 ಲಕ್ಷ ಗಳನ್ನು ಕಾರ್ಯಪ್ರಗತಿ ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 14 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ. 2250 ಮನೆಗಳಲ್ಲಿ 1077 ಮನೆಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗಿದೆ. 290 ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಗುಂಡ್ಲಪಲ್ಲಿ, ಜಿಲಕರಪಲ್ಲಿ, ದೇವರಗುಡಿಪಲ್ಲಿ, ಕೊಂಡಂವಾರಿಪಲ್ಲಿ ಗ್ರಾಮಗಳ ಪಕ್ಕದಲ್ಲಿ 193 ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಗುರಿ ಇದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನ, ಕಂದಾಯ ವಸೂಲಿ, ಹಣಕಾಸು ಯೋಜನೆ ಸದ್ಬಳಕೆ, ಕೆರೆ, ಕುಂಟೆ, ಕಟ್ಟೆಗಳ ಅಭಿವೃದ್ಧಿಗೆ ಮಾನದಂಡ ಆಧಾರವಾಗಿರಿಸಿ, 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಗೆ ಈ ಭಾರಿ ರಾಜ್ಯ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯ್ಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT