ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೈ ಬೀಸಿ ಕರೆಯುತ್ತಿದೆ ಮಾರ್ಗಾನುಕುಂಟೆ ಸರ್ಕಾರಿ ಪ್ರೌಢಶಾಲೆ

ಮಾರ್ಗಾನುಕುಂಟೆ ಶಾಲೆಯಲ್ಲಿ ಸಿಲ್ವರ್ ಓಕ್, ಗಸೆಗಸೆ ಗಿಡ, ಮಾವು, ಬೇವು, ಹಲಸಿನ ಮರಗಳು
Published : 7 ಸೆಪ್ಟೆಂಬರ್ 2024, 7:09 IST
Last Updated : 7 ಸೆಪ್ಟೆಂಬರ್ 2024, 7:09 IST
ಫಾಲೋ ಮಾಡಿ
Comments

ಗೂಳೂರು(ಬಾಗೇಪಲ್ಲಿ): ಶಿಕ್ಷಕ, ಶಿಕ್ಷಕಿಯರು ಮನಸ್ಸು ಮಾಡಿದರೆ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಜೊತೆಗೆ, ಶಾಲಾವರಣದಲ್ಲಿ ಹಚ್ಛ ಹಸಿರಿನ ಪರಿಸರ ಉಳಿಸಿ, ಬೆಳೆಸಬಹುದು ಎನ್ನುವುದಕ್ಕೆ ಆಂಧ್ರಪ್ರದೇಶದ ಗಡಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಗಿದೆ. ಶಿಕ್ಷಕ, ಶಿಕ್ಷಕಿ, ವಿದ್ಯಾರ್ಥಿಗಳು ಶ್ರಮವಹಿಸಿ ಗಿಡ, ಮರ ಬೆಳೆಸಿದ ವನಸಿರಿಯ ತಂಪು ಕೈ ಬೀಸಿ ಕರೆಯುತ್ತಿದೆ.

ತಾಲ್ಲೂಕಿನ ಗೂಳೂರು ಹೋಬಳಿಯ ಮಾರ್ಗಾನುಕುಂಟೆ ಗ್ರಾಮವು, ನೆರೆಯ ಆಂಧ್ರಪ್ರದೇಶದ ಗಡಿ ಅಂಚಿನಲ್ಲಿ ಇದೆ. 60ಕ್ಕೂ ಹೆಚ್ಚು ಗ್ರಾಮಗಳಿಂದ ಮಾರ್ಗಾನುಕುಂಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಬರುತ್ತಾರೆ.

ಮಾರ್ಗಾನುಕುಂಟೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. 1983ರಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಾರಂಭವಾಗಿದೆ. 23 ಕುಂಟೆಯ ಪ್ರದೇಶದಲ್ಲಿ ಹಳೆ ಶಾಲಾ ಕಟ್ಟಡದ ಜತೆಗೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. 13 ಶಾಲಾ ಕೊಠಡಿ ಇವೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಇದೀಗ 142 ವಿದ್ಯಾರ್ಥಿಗಳ ಪೈಕಿ, 9ನೇ ತರಗತಿಯಲ್ಲಿ 76 ಮಂದಿ ಹಾಗೂ 10ನೇ ತರಗತಿಯಲ್ಲಿ 66 ಮಂದಿ ಕಲಿಯುತ್ತಿದ್ದಾರೆ.

ಶಾಲಾವರಣದಲ್ಲಿ ಕೊಳವೆಬಾವಿ ಇದೆ. ದಿನದ 24 ಗಂಟೆಯಲ್ಲೂ ಕುಡಿಯುವ ನೀರಿನ ಜೊತೆಗೆ ಗಿಡ ಮರಗಳಿಗೆ ನೀರುಣಿಸಲು ಸಹಕಾರಿ ಆಗಿದೆ. ನೂತನ ಕಟ್ಟಡ ನಿರ್ಮಾಣದ ನಂತರ ಮುಂಭಾಗದ ಜಾಗದಲ್ಲಿ ಹಾಗೂ ಮುಖ್ಯದ್ವಾರದಲ್ಲಿ ಗಿಡ, ಮರ ಬೆಳೆಸಲಾಗಿದೆ. ಮುಖ್ಯದ್ವಾರದ ಹಾಗೂ ಶಾಲಾ ಕೊಠಡಿ ಮೇಲೆ ಹೂವಿನ ಬಳ್ಳಿ ಬಿಡಲಾಗಿದೆ. ಮೊದಲಿಗೆ ಶಾಲಾ ಮುಂದೆ ಕೊಠಡಿಗೆ, ಅಡುಗೆ ಕೋಣೆ, ಒಳ, ಹೊರಗಡೆ ನಡೆದಾಡಲು ಪಾದಚಾರಿ ರಸ್ತೆ ಮಾಡಲಾಗಿದೆ.

ಸಿಲ್ವರ್ ಓಕ್, ಗಸೆಗಸೆ ಗಿಡ, ಅಶೋಕ ಬುಷ್, ಮಾವು, ಬೇವು, ಹಲಸು ಸೇರಿದಂತೆ ಬಣ್ಣ ಬಣ್ಣದ ವಿವಿಧ ತಳಿಯ ಹೂವು ಹಾಗೂ ಹಣ್ಣಿನ ಗಿಡ ಇದೆ. ಏಳು ಸಿಮೆಂಟ್ ಬೆಂಚುಗಳನ್ನು ಹಾಕಲಾಗಿದೆ.

ಶಾಲೆ ಪ್ರವೇಶಿಸುತ್ತಿದ್ದಂತೆ ಹಚ್ಚ ಹಸಿರಿನ ಪರಿಸರವು ಕಣ್ಣಿಗೆ ಮುದ ನೀಡುತ್ತಿದೆ. ಗಿಡ ಮರಗಳ ಪರಿಸರದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಲಿಕೆಗೆ ಉತ್ತಮ ವಾತಾವರಣ ಉಂಟು ಮಾಡಿದೆ.

ಉಳಿದಂತೆ ಶಾಲಾವರಣದಲ್ಲಿ ಬೀನ್ಸ್, ಕ್ಯಾರೆಟ್, ಮೂಲಂಗಿ, ಬದನೆ, ನುಗ್ಗೆಕಾಯಿ ಸೇರಿದಂತೆ ತರಕಾರಿ ಹಾಗೂ ಪಾಲಕ್‌, ದಂಟು, ಕೊತ್ತಂಬರಿ, ಕರಿಬೇವಿನ ಸೊಪ್ಪು ಸೇರಿದಂತೆ ವಿವಿಧ ಸೊಪ್ಪುಗಳನ್ನು ಬೆಳೆಸಿ ಮಧ್ಯಾಹ್ನದ ಬಿಸಿಊಟಕ್ಕೆ ಬಳಕೆ ಮಾಡಲಾಗುತ್ತಿದೆ.

‘ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಉತ್ತಮವಾದ ಪರಿಸರವನ್ನು ಬೆಳೆಸಿದ್ದಾರೆ. ಗಿಡ, ಮರಗಳು ಬೆಳೆಸಿ, ಉಳಿಸಿದ್ದಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಲಿಕೆಗೆ ಪೂರಕವಾಗಿದೆ. ಮಾರ್ಗಾನುಕುಂಟೆ ಸರ್ಕಾರಿ ಪ್ರೌಢಶಾಲೆಯ ಪರಿಸರದಂತೆ, ಎಲ್ಲಾ ಸರ್ಕಾರಿ ಶಾಲೆಯಲ್ಲಿ ಗಿಡ ಮರ ಬೆಳೆಸಿ, ಉಳಿಸಬೇಕು’ ಎಂದು ವಕೀಲ ಆರ್.ಜಯಪ್ಪ ತಿಳಿಸಿದರು.

ಶಾಲಾ ಆವರಣದಲ್ಲಿ ಗಿಡ ಮರ ಬೆಳೆಸಿರುವುದು
ಶಾಲಾ ಆವರಣದಲ್ಲಿ ಗಿಡ ಮರ ಬೆಳೆಸಿರುವುದು

‘ಪರಿಸರದ ಬಗ್ಗೆ ಬೋಧನೆ ಮಾಡುವ ಜೊತೆಗೆ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಪರಿಸರ, ಗಿಡ, ಮರಗಳ ತಳಿಗಳು, ಉಪಯೋಗಗಳ ಬಗ್ಗೆ ಬೋಧಿಸುತ್ತಿದ್ದೇನೆ. ಸಮುದಾಯದ ಋಣ ತೀರಿಸಲು ಶಿಕ್ಷಕ, ಶಿಕ್ಷಕಿಯರಿಗೆ, ಶೈಕ್ಷಣಿಕ ಪ್ರಗತಿಯ ಜೊತೆಗೆ ಪರಿಸರ ಕಾಪಾಡುವುದು ಕರ್ತವ್ಯವಾಗಿದೆ’ ಎಂದು ಮಾರ್ಗಾನುಕುಂಟೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಪಿ.ಸುಬ್ರಮಣ್ಯಂ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT