ಬುಧವಾರ, ಜುಲೈ 28, 2021
21 °C

ಕೋವಿಡ್–19 ಸೋಂಕಿನಿಂದ ಗುಣಮುಖ: ಕಾನ್‌ಸ್ಟೆಬಲ್‌ಗೆ ವಿಶೇಷ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕೋವಿಡ್–19ಗೆ ತುತ್ತಾಗಿ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಸೋಮವಾರ ಕರ್ತವ್ಯಕ್ಕೆ ಮರಳಿದ ಎಸ್‌ಸ್ಪಿ ಕಚೇರಿಯ ವೈರ್‌ಲೆಸ್‌ ವಿಭಾಗದ ಹೆಡ್‌ ಕಾನ್‌ಸ್ಟೆಬಲ್ ಚಂದ್ರಶೇಖರ್ ಅವರಿಗೆ ಎಸ್ಪಿ ಕಚೇರಿಯಲ್ಲಿ ವಿಶೇಷ ಸ್ವಾಗತ ಏರ್ಪಡಿಸಲಾಗಿತ್ತು.

ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಮತ್ತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಚಂದ್ರಶೇಖರ್ ಅವರನ್ನು ಸ್ವಾಗತಿಸಿ ಆರೋಗ್ಯದ ಬಗ್ಗೆ ವಿಚಾರಿಸಿ, ಆತ್ಮಸ್ಥೈರ್ಯ ತುಂಬಿದರು. ಚಂದ್ರಶೇಖರ್ ಅವರು ಎಸ್ಪಿ ಕಚೇರಿ ಪ್ರವೇಶದ ವೇಳೆ ಮಹಿಳಾ ಸಿಬ್ಬಂದಿ ಅವರ ಮೇಲೆ ಹೂವುಗಳನ್ನು ಎರಚಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು