ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದ್ರಧನುಷ್ ಲಸಿಕಾ ಅಭಿಯಾನ: ಸಿದ್ಧತೆ

Last Updated 1 ಡಿಸೆಂಬರ್ 2019, 15:01 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮಿಷನ್ ಇಂದ್ರಧನುಷ್ ಅಭಿಯಾನವನ್ನು 4 ಹಂತಗಳಲ್ಲಿ ಹಮ್ಮಿಕೊಂಡಿದೆ.

ಡಿ. 2, ಜ. 6, ಫೆ. 3, ಮಾರ್ಚ್ 2ರಂದು ಲಸಿಕಾ ಅಭಿಯಾನ ಆರಂಭವಾಗಲಿದೆ. ಪ್ರತೀ ಹಂತದಲ್ಲೂ 2 ದಿನಗಳವರೆಗೆ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತದೆ.

ಅಭಿಯಾನದ ಪೂರ್ವಭಾವಿಯಾಗಿ ಮನೆಮನೆ ಸಮೀಕ್ಷೆ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ಪಟ್ಟಿ ಮಾಡಲಾಗಿದ್ದು ಇವರಿಗೆ ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು62 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ 48, ನಗರ ಪ್ರದೇಶದಲ್ಲಿ14. ಚಾಮರಾಜನಗರ ತಾಲ್ಲೂಕಿನ ನಗರ ಪ್ರದೇಶದಲ್ಲಿ 7, ಗ್ರಾಮೀಣ ಪ್ರದೇಶದಲ್ಲಿ 16, ಗುಂಡ್ಲುಪೇಟೆ ತಾಲ್ಲೂಕಿನ ನಗರ ಪ್ರದೇಶದಲ್ಲಿ 1, ಗ್ರಾಮಾಂತರ ಪ್ರದೇಶದಲ್ಲಿ 5, ಕೊಳ್ಳೇಗಾಲ ತಾಲ್ಲೂಕಿನ ನಗರ ಪ್ರದೇಶದಲ್ಲಿ 5, ಗ್ರಾಮಾಂತರ ಪ್ರದೇಶದಲ್ಲಿ 21, ಯಳಂದೂರು ತಾಲ್ಲೂಕಿನ ನಗರ ಪ್ರದೇಶದಲ್ಲಿ 1, ಗ್ರಾಮಾಂತರ ಪ್ರದೇಶದಲ್ಲಿ6 ಲಸಿಕಾ ಕೇಂದ್ರಗಳು ನಿರ್ವಹಣೆಯಾಗಲಿವೆ.

‘ಜಿಲ್ಲೆಯಲ್ಲಿ ಒಟ್ಟಾರೆ ಲಸಿಕೆಯಿಂದ ವಂಚಿತರಾಗಿರುವ18 ಗರ್ಭಿಣಿಯರು,158 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT