ಶಿಡ್ಲಘಟ್ಟ: ತಾಲ್ಲೂಕಿನ ರೈತರು ಬೆಳೆದ ಜಂಬುನೇರಳೆ ಹಣ್ಣು ಮೊಟ್ಟಮೊದಲ ಬಾರಿಗೆ ವಿದೇಶಕ್ಕೆ ಹಾರಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜಂಬುನೇರಳೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಸಿಗುವ ಆಶಾಭಾವನೆ ರೈತರಲ್ಲಿ ಮೂಡಿದೆ.

ತಾಲ್ಲೂಕಿನ ಕನ್ನಮಂಗಲದ ರೈತ ಕೆ.ಎನ್.ಮಾರೇಶ್ ಬೆಳೆದ ಒಂದು ಟನ್ ಜಂಬುನೇರಳೆ ಹಣ್ಣು ಈ ಬಾರಿ ಲಂಡನ್ನಿಗೆ ರಫ್ತು ಆಗಿದೆ.

ಎರಡೂವರೆ ಎಕರೆ ತೋಟದಲ್ಲಿ ನೂರು ಜಂಬುನೇರಳೆ ಮರಗಳಿವೆ. ಎಂಟು ವರ್ಷಗಳಿಂದ ಫಸಲು ಕೊಡುತ್ತಿವೆ. ಹಣ್ಣು ಬಿಟ್ಟಾಗ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಿದ್ದೆವು. ಕೆಲವು ಸಲ ಹೆಚ್ಚು ಹಣ್ಣುಗಳು ಆವಕವಾದಾಗ, ಖರೀದಿಸುವವರಿಲ್ಲದೆ ಬಿಸಾಕುತ್ತಿದ್ದೆವು. ಈಗ ಮ್ಯಾಂಗೊ ಬೋರ್ಡ್ ವ್ಯವಸ್ಥಾಪಕ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಂಬುನೇರಳೆ ಹಣ್ಣಿಗೆ ವಿದೇಶಕ್ಕೆ ರಫ್ತಾಗುವ ಅವಕಾಶ ಲಭಿಸಿದೆ ಎಂದು ರೈತ ಕೆ.ಎನ್. ಮಾರೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.