ಶನಿವಾರ, ನವೆಂಬರ್ 23, 2019
18 °C

ಸುಧಾಕರ್ ಬಣಕ್ಕೆ ಜೆಡಿಎಸ್‌ ಮುಖಂಡ

Published:
Updated:
Prajavani

ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಕೇಶವಕುಮಾರ್ ಅವರು ಇತ್ತೀಚೆಗೆ ಜೆಡಿಎಸ್‌ ತೊರೆದು ತಮ್ಮ ಬೆಂಬಲಿಗರೊಂದಿಗೆ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ಬಣಕ್ಕೆ ಸೇರ್ಪಡೆಯಾದರು.

ಕೇಶವಕುಮಾರ್ ಅವರ ಮನೆಯ ಬಳಿ ನಡೆದ ಕಾರ್ಯಕ್ರಮದಲ್ಲಿ ಅವರೊಂದಿಗೆ ಮುಖಂಡರಾದ ಗೋಪಾಲಪ್ಪ, ಕೆ.ಚಂಗಪ್ಪ, ಎಂ.ಕೆ.ಅಶ್ವತ್ಥಪ್ಪ, ವೆಂಕಟಾಚಲಪತಿ, ಬಿ.ಸಿ.ನರಸಪ್ಪ, ನಾರಾಯಣಸ್ವಾಮಿ ಬಿ.ಎಚ್.ವೆಂಕಟೇಶ್, ವಿ.ಪಿ.ಸುರೇಂದ್ರ, ಕೆ.ರಾಮಚಂದ್ರ, ಕೆ.ಇ.ಬಿ.ಅಶ್ವತ್ಥನಾರಾಯಣ, ಸಿ.ವಿ.ಮುನಿರಾಜು, ದಿವಾಕರ್ ಬಾಬು, ಬಿ.ವಿ.ವೆಂಕಟೇಶ್, ಜಯರಾಂ ಅಗರಬತ್ತಿ, ಎನ್.ನಟರಾಜು, ಶಿವಕುಮಾರ್, ವಿಜಯಕುಮಾರ್, ಎಸ್.ಕೃಷ್ಣಪ್ಪ, ಆರ್.ಕೃಷ್ಣಪ್ಪ, ಸಿ.ಎಸ್.ಭರತ್, ಶಶಿ, ಶ್ರೀನಿವಾಸ್, ಸುಬ್ಬಾಚಾರಿ, ಶ್ರೀನಿವಾಸ್ ಸುಧಾಕರ್ ಅವರ ಬಣ ಸೇರಿದರು.

ಮಾಜಿ ಶಾಸಕ ಎಂ.ಶಿವಾನಂದ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್, ಲೀಲಾವತಿ ಶ್ರೀನಿವಾಸ್, ಪೆರಿಕಲ್ ಮಂಜುನಾಥ್, ಮುನಿಕೃಷ್ಣ, ಗಜೇಂದ್ರ, ಸುಬ್ರಹ್ಮಣ್ಯಾಚಾರಿ, ಇಂತಿಯಾಜ್, ಜಿ.ಆರ್.ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)