‘ಶೌರ್ಯ ದಿವಸ ಘೋಷಣೆಯಾಗಲಿ’

ಕಡೂರು: ದಲಿತ ಸ್ವಾಭಿಮಾನದ ಸಂಕೇತ ಭೀಮಾಕೊರೆಂಗಾವ್ ವಿಜಯ ದಿನವನ್ನು ಶೌರ್ಯ ದಿನವನ್ನಾಗಿ ಸರ್ಕಾರ ಆಚರಿಸಬೇಕು ಎಂದು ಡಿಎಸ್ಎಸ್ ಮೈಸೂರು ವಿಭಾಗೀಯ ಸಂಚಾಲಕ ಶೂದ್ರ ಶ್ರೀನಿವಾಸ್ ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಡಿಎಸ್‌ಎಸ್ ಅಂಬೇಡ್ಕರ್ ವಾದ ಮತ್ತು ದಲಿತಪರ ಸಂಘಟನೆಗಳ ವತಿಯಿಂದ ಎರ್ಪಡಿಸಿದ್ದ ಭೀಮಾಕೋರೆಗಾಂವ್ 205ನೇ ವಿಜಯದಿವಸ ಆಚರಣೆಯಲ್ಲಿ ಅವರು ಮಾತನಾಡಿದರು.
ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪಶ್ಯತೆ, ತಾರತಮ್ಯದ ವಿರುದ್ಧ ಸೆಟೆದು ನಿಂತ ಸ್ವಾಭಿಮಾನಿ ಸೈನಿಕರು ಜಯಸಾಧಿಸಿದ ಐತಿಹಾಸಿಕ ದಿನವಿದು ಎಂದರು.
ತಾಲ್ಲೂಕು ಸಂಚಾಲಕ ಗಂಗರಾಜ್ ಮಾತನಾಡಿ, ಪ್ರಪಂಚದಲ್ಲಿ ಸ್ವಾಭಿ ಮಾನಕ್ಕಾಗಿ ಯುದ್ದ ನಡೆದಿದ್ದರೆ ಅದು ಕೋರೆಗಾಂವ್ ಹೋರಾಟ ಮಾತ್ರ ಎಂದರು..
ಮಾದಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವೈ.ವಾಸು, ಮುಖಂಡರಾದ ಶಾಂತಮೂರ್ತಿ, ಕೃಷ್ಣಸ್ವಾಮಿ, ಜಗದೀಶ್ ಮಾತನಾ ಡಿದರು. ಸಗನಪ್ಪ, ಎನ್.ಗಿರೀಶ್, ರಾಘವೇಂದ್ರ, ಬಸವರಾಜ್, ಸುರೇಶ್, ಹುಲ್ಲೇಹಳ್ಳಿ ಲಕ್ಷ್ಮಣ್, ತಿಮ್ಮಣ್ಣ, ಗೋಪಿನಾಥ್, ವೈ.ಟಿ. ಗೋವಿಂದಪ್ಪ, ಗ್ರಾಮಪಂಚಾಯಿತಿ ಸದಸ್ಯ ಚಂದ್ರಪ್ಪ, ಪ್ರಸನ್ನ, ಕಿರಣ್, ಪ್ರದೀಪ್, ಶ್ರೀನಿವಾಸ್ ನಾಯ್ಕ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.