ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸ್ ನಿಲ್ದಾಣದಲ್ಲಿ ಸಿಕ್ಕಿದ ಪರ್ಸ್‌ನ್ನು ಮಾಲೀಕರಿಗೆ ಒಪ್ಪಿಸಿದ KSRTC ಸಿಬ್ಬಂದಿ

Published 4 ಜುಲೈ 2024, 14:29 IST
Last Updated 4 ಜುಲೈ 2024, 14:29 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ಬಸ್ ನಿಲ್ದಾಣದಲ್ಲಿ ಸಿಕ್ಕಿದ ಪರ್ಸ್ ಅದರಲ್ಲಿದ್ದ ನಗದು ಸಮೇತ ಮಾಲೀಕರಿಗೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಒಪ್ಪಿಸಿದ್ದಾರೆ.

ಗುರುವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಗ್ರಾಮದಿಂದ ಶಿಡ್ಲಘಟ್ಟ ನಗರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರೂಪಾ ಪರ್ಸ್‌ ಕಳೆದುಕೊಂಡವರು.

ಪರ್ಸ್ ಇಲ್ಲದಿರುವುದನ್ನು ಅರಿತ ಮಹಿಳೆ, ಬಸ್ ನಿಲ್ದಾಣಕ್ಕೆ ಬಂದು ಹುಡುಕಾಟ ನಡೆಸಿದ್ದರು. ಸಂಚಾರ ನಿಯಂತ್ರಕ ಡಿ.ವಿ. ಚಲಪತಿ ಪರ್ಸ್‌ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕ ಜೆ.ಗಂಗಾಧರ್ ಸಮ್ಮುಖದಲ್ಲಿ ಪ‍ರ್ಸ್‌ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT