ಜಿಲ್ಲೆಯ ಜನರು ‘ಸಪ್ತಪದಿ’ ಯೋಜನೆಯಡಿ ವಿವಾಹಕ್ಕೆ ವಿದುರಾಶ್ವತ್ಥ ದೇಗುಲಕ್ಕಿಂತ ನೆರೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇಗುಲದತ್ತ ಹೆಚ್ಚು ಚಿತ್ತ ಹರಿಸುತ್ತಿದ್ದಾರೆ. ಮುಜುರಾಯಿ ಇಲಾಖೆ ಸಪ್ತಪದಿ ಯೋಜನೆಯಡಿ ನೋಂದಣಿಗೆ ಅವಕಾಶ ನೀಡಿದ ವೇಳೆ ವಿದುರಾಶ್ವತ್ಥದಲ್ಲಿ ನೋಂದಣಿಯೇ ಆಗಿಲ್ಲದ ದಿನಗಳೂ ಇವೆ. ಜಿಲ್ಲೆಯ ಜನರು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ‘ಸಪ್ತಪದಿ’ ತುಳಿಯಲು ಇಚ್ಛಿಸುತ್ತಾರೆ ಎನ್ನುತ್ತವೆ ಮುಜುರಾಯಿ ಇಲಾಖೆ ಮೂಲಗಳು.