ಸೋಮವಾರ, ಜನವರಿ 17, 2022
18 °C

ಚಿಂತಾಮಣಿ: ಬಡಗವಾರಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಚಂದ್ರನ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ವಾಲ್ಮೀಕಿ ಜಯಂತಿ ಆಚರಣೆಯು ಶ್ರದ್ಧಾಭಕ್ತಿಯಿಂದ ನಡೆಯಿತು.

ಸಾಮೂಹಿಕ ಪ್ರಾರ್ಥನೆ, ಹಿತನುಡಿ, ಚಂದ್ರನ ಪೂಜಾ ನಂತರ ಶ್ರೀನಿವಾಸಪುರ ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದ ಮಂಜುಳಮ್ಮ, ಲಕ್ಷ್ಮಮ್ಮ, ಮುನಿಯಮ್ಮ ಮುದ್ದಲಪಲ್ಲಿ ರಾಮಕೃಷ್ಣಾರೆಡ್ಡಿ, ನಾನಮ್ಮ, ಮುನಿವೆಂಕಟಮ್ಮ, ಶಿವ, ಕರಿಯಪ್ಪಲ್ಲಿ ಗ್ರಾಮದ ಶಿವಮ್ಮ, ಬಡಗವಾರಹಳ್ಳಿ ಕದಿರಮ್ಮ, ನರಸಮ್ಮ, ಅನುಪ್ಪಲ್ಲಿ ನಾರಾಯಣಸ್ವಾಮಿ ತತ್ವಪದಗಳ ಗಾಯನ ಮಾಡಿದರು.

ಭಕ್ತರ ಗಾಯನಕ್ಕೆ ಬುಕ್ಕನಹಳ್ಳಿ ನರಸಿಂಹಪ್ಪ ತಬಲ ಮತ್ತು ಕಾಗತಿ ವೆಂಕಟಕೃಷ್ಣ ಅವರು ಹಾರ್ಮೋನಿಯಂ ಸಾಥ್‌ ನೀಡಿದರು. ಸಮಾಜಕ್ಕೆ ದಾರಿ ತೋರುವ ಹಲವಾರು ಅರ್ಥಗರ್ಭಿತ ತತ್ವಪದಗಳನ್ನು ತಂಡಗಳಲ್ಲಿ ರಾತ್ರಿ ಪ್ರಾರಂಭ ಮಾಡಿ, ಮರುದಿನ ಬೆಳಗಿನ ಜಾವದವರೆಗೂ ಗಾಯನ ಮಾಡಿದರು.

ತತ್ವಪದಗಳ ಸಂಶೋಧಕ ಚಿಕ್ಕಬಳ್ಳಾಪುರದ ಗೋಪಾಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಪ್ರಾತಃ ಸ್ಮರಣೀಯರು. ಸಹವಾಸಗಳಿಂದಾಗಿ ಮನುಷ್ಯ ಹೇಗೆ ಮಾರ್ಪಾಡಾಗಿ ಮಹರ್ಷಿ ಆಗಬಲ್ಲನು ಎಂಬುದಕ್ಕೆ ನಿದರ್ಶನರಾಗಿದ್ದಾರೆ
ಎಂದರು.

ದೇವಾಯಲದ ಟ್ರಸ್ಟ್ ಅಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿ, ಸತ್ಸಂಗಗಳಿಂದ ಜೀವನ ಸುಗಮ ದಾರಿಯಲ್ಲಿ ಸಾಗಿ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ಜತೆಗೆ ಜನರಲ್ಲಿ ಮಾನಸಿಕ ಸ್ಥಿರತೆಗೆ ಸತ್ಸಂಗ ಸಹಕಾರಿಯಾಗಿದೆ. ಜನರು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ಸನ್ಮಾರ್ಗವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಕಾಗತಿ ಗ್ರಾಮದ ನಿವೃತ್ತ ಮೇಲ್ವಿಚಾರಕ ವಿ. ನಾಗರಾಜ, ವಕೀಲ ಶ್ರೀನಿವಾಸನ್, ರೈತ ರವಿ ಅವರು ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಕಾಗತಿ ಕೃಷ್ಣಮ್ಮನವರ ಕೃಷ್ಣಪ್ಪ ಗಜೇಂದ್ರ, ಚಲಪತಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು