ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋತಿಗಳ ಸಾಮೂಹಿಕ ಹತ್ಯೆ: ವಿಷವುಣಿಸಿದ ಶಂಕೆ

Last Updated 9 ಫೆಬ್ರವರಿ 2021, 1:35 IST
ಅಕ್ಷರ ಗಾತ್ರ

ಗೌರಿಬಿದನೂರು:ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ30 ಕೋತಿಗಳು ಸಾವನ್ನಪ್ಪಿವೆ. ಕೋತಿಗಳ ಕಾಟ ತಾಳಲಾರದೆ ಗ್ರಾಮಸ್ಥರು ಅವುಗಳಿಗೆ ವಿಷವುಣಿಸಿದ ಶಂಕೆ ವ್ಯಕ್ತವಾಗಿದೆ.

ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 50ಕ್ಕೂ ಹೆಚ್ಚು ಕೋತಿಗಳನ್ನು ಹಿಡಿದು ಬೋನಿನಲ್ಲಿ ಬಂಧಿಸಿ ಇಡಲಾಗಿತ್ತು. ರಾತ್ರಿ ಬೋನಿನಲ್ಲಿದ್ದ ಕೆಲವು ಕೋತಿಗಳು ಏಕಾಏಕಿ ಅಸ್ವಸ್ಥಗೊಂಡು, ಮೂರ್ಛೆ ಹೋಗಿವೆ. ಆ ಪೈಕಿ 30ಕ್ಕೂ ಹೆಚ್ಚು ಕೋತಿಗಳು ಉಸಿರುಗಟ್ಟಿ ಸತ್ತು ಹೋಗಿವೆ.

ಸತ್ತ ಮತ್ತು ಬದುಕುಳಿದ ಕೋತಿಗಳನ್ನು ರಾತ್ರೋರಾತ್ರಿ ಟ್ರ್ಯಾಕ್ಟರ್‌ನಲ್ಲಿಗೌರಿಬಿದನೂರು ಪಟ್ಟಣದ ಕಲ್ಲೂಡಿ ರೈಲ್ವೆ ಹಳಿಯ ಬಳಿಸಾಗಿಸಲಾಗುತ್ತಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹಿಂದೂ ಜಾಗರಣ ವೇದಿಕೆಯ (ಹಿಂಜಾವೆ) ಸದಸ್ಯರುಟ್ರ್ಯಾಕ್ಟರ್ ಹಾಗೂ ಚಾಲಕನನ್ನು ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬದುಕುಳಿದ ಕೋತಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ವಿಷ ಹಾಕಿದ ಶಂಕೆ: ಗ್ರಾಮದ ಮುಖಂಡರೊಬ್ಬರ ಅಣತಿಯಂತೆ ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ. ಪ್ರಕರಣವನ್ನು ಮುಚ್ಚಿ ಹಾಕಲು ರಾತ್ರೋರಾತ್ರಿ ರೈಲ್ವೆ ಹಳಿಯ ಬಳಿ ಕೋತಿಗಳ ಶವ ಬಿಸಾಡಲು ಯತ್ನಿಸುವಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಹಿಂಜಾವೆ ಸದಸ್ಯರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT