ಶನಿವಾರ, ಜನವರಿ 29, 2022
23 °C

ಚಿಕ್ಕಬಳ್ಳಾಪುರ: ಓಂಶಕ್ತಿ ಯಾತ್ರೆಗೆ ಸಚಿವರ ಸಂಬಂಧಿ ಬಸ್‌ ವ್ಯವಸ್ಥೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರ ಭಾವಮೈದ ಹಾಗೂ ಬಿಜೆಪಿ ಮುಖಂಡ ಕೋನಪಲ್ಲಿ ಸತ್ಯನಾರಾಯಣರೆಡ್ಡಿ ಸೋಮವಾರ ಎಂಟು ಬಸ್‌ಗಳಲ್ಲಿ ನೂರಾರು ಜನರನ್ನು ಓಂಶಕ್ತಿ ಯಾತ್ರೆಗೆ ತಮಿಳುನಾಡಿಗೆ ಕಳಿಸಿದರು. 

ತಾಲ್ಲೂಕಿನ ಬೂರಗಮಾಕಲಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಬಸ್‌ಗಳಿಗೆ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಸತ್ಯನಾರಾಯಣರೆಡ್ಡಿ ಚಾಲನೆ ನೀಡಿದರು. ಅವರು ಉಚಿತವಾಗಿ ವ್ಯವಸ್ಥೆ ಮಾಡಿದ ಎಂಟು ಬಸ್‌ಗಳಲ್ಲಿ ನೂರಾರು ಮಾಲಧಾರಿಗಳು ತಮಿಳುನಾಡಿನ ಓಂ ಶಕ್ತಿ ಅಮ್ಮನವರ ದೇವಾಲಯಕ್ಕೆ ತೆರಳಿದರು. 

‘ಓಂಶಕ್ತಿ ಅಮ್ಮನವರ ದೇವಾಲಯಕ್ಕೆ ಕ್ಷೇಮವಾಗಿ ಹೋಗಿ ಬಂದು ಆಶೀರ್ವಾದ ಮಾಡಬೇಕು. ದಿನೇ ದಿನೇ ಕೊರೊನಾ ಪ್ರಕರಣ  ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಮಾರ್ಗಸೂಚಿ ಪಾಲಿಸಬೇಕು’ ಎಂದು ಅವರು ಮನವಿ ಮಾಡಿದರು.

ಬಿಜೆಪಿ ತಾ. ಘಟಕದ ಅಧ್ಯಕ್ಷ ಶಿವಾರೆಡ್ಡಿ, ನಗರ ಘಟಕ ಅಧ್ಯಕ್ಷ ಮಹೇಶ್ ಬೈ, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ದಿ, ಜಿಲ್ಲಾ ಕಾರ್ಯದರ್ಶಿ ಗೊವಿಂದರಾಜು, ಮುಖಂಡರಾದ ಕುರುಬೂರು ರಾಜಣ್ಣ, ನಾರಾಯಣರೆಡ್ದಿ, ಮನೋಹರೆಡ್ದಿ, ಕೆ. ಶ್ರೀನಿವಾಸ್, ಗಾಜಲು ಶಿವ, ಕೈವಾರ ಜಯರಾಮ್, ಬೂರುಗಮಾಕಲಹಳ್ಳಿ ಬೈರೆಗೌಡ, ಮಾಳಪ ಶಿವಾರೆಡ್ಡಿ, ವಿ.ಎಲ್.ಕೃಷ್ಣಸ್ವಾಮಿ ಮತಿತ್ತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು