ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ-ತಾಯಿ ಹೆಸರಿನಲ್ಲಿ ವೃದ್ಧಾಶ್ರಮ

Last Updated 7 ಸೆಪ್ಟೆಂಬರ್ 2020, 16:48 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ತಮ್ಮ ಸ್ವಗ್ರಾಮ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ‘ನಮ್ಮ ತಂದೆ ದಿವಂಗತ ನಂಜುಂಡರೆಡ್ಡಿ, ತಾಯಿ ಆದಿಲಕ್ಷಮ್ಮ ಅವರ ಹೆಸರಿನಲ್ಲಿ ವೃದ್ಧಾಶ್ರಮ ಆರಂಭಿಸಲಾಗುವುದು’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಸ್ವಗ್ರಾಮವಾದ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಂದೆ ಎಸ್.ನಂಜುಂಡರೆಡ್ಡಿರವರ ನೆನೆಪಿನ ಕಾರ್ಯಕ್ರಮದ ಅಂಗವಾಗಿ ಬಡವರಿಗೆ ಹಾಗೂ ಗೂಳೂರಿನ ವೃದ್ಧಾಶ್ರಮದವರಿಗೆ ವಸ್ತ್ರದಾನ ಮಾಡಿ ಮಾತನಾಡಿದರು.

ಅನೇಕರು ತಂದೆ-ತಾಯಿ ಜೀವಂತವಿದ್ದಾಗ ಗೌರವ ಕೊಡದೆ, ಅನ್ನಹಾಕದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪೋಷಕರು ನಿಧನ ಆದ ಬಳಿಕ ವೈಭವದ ಗೋರಿಗಳನ್ನು ನಿರ್ಮಿಸಿದರೆ ಗೌರವ ತೋರಿದಂತೆ ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಕೃಷ್ಣೇಗೌಡ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪತ್ನಿ ಶೀಲಾ ಸುಬ್ಬಾರೆಡ್ಡಿ, ಎಸ್.ಎನ್.ಸೂರ್ಯನಾರಾಯಣರೆಡ್ಡಿ, ಎಸ್.ಎನ್.ಶ್ರೀನಿವಾಸರೆಡ್ಡಿ, ಅಮರನಾಥರೆಡ್ಡಿ, ಆರ್.ಹನುಮಂತರೆಡ್ಡಿ, ರಾಮಕೃಷ್ಣಾರೆಡ್ಡಿ, ಅರ್ಜುನ್, ಅಶೋಕ್ ರೆಡ್ಡಿ, ರಘುನಾಥರೆಡ್ಡಿ, ಅಭಿಷೇಕ್, ಅಮೃತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT