ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ ‌ಮೇಲೆ ವಾಹನಗಳ ಸಂಚಾರಕ್ಕೆ ಅಂಕುಶ

Published 29 ಮೇ 2023, 13:37 IST
Last Updated 29 ಮೇ 2023, 13:37 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಅರವಿಂದ ನಗರ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ‌ಮೇಲ್ಸೇತುವೆ ಕಾಮಗಾರಿಯು ಪೂರ್ಣವಾಗದೆ ವಾಹನಗಳ‌ ಸಂಚಾರಕ್ಕೆ ಸೋಮವಾರ ಅವಕಾಶಕ್ಕೆ ಅಧಿಕಾರಿಗಳು ಅಂಕುಶ ಹಾಕಿದ್ದಾರೆ. 

ಮೇ 27ರ ಶನಿವಾರದಂದು ಈ ಕುರಿತು ಪ್ರಜಾವಾಣಿ ಪತ್ರಿಕೆಯು ‘ಇನ್ನೂ ಪೂರ್ಣವಾಗದ ಮೇಲ್ಸೇತುವೆ ಕಾಮಗಾರಿ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ‌ಮತ್ತು ಗುತ್ತಿಗೆದಾರರು ಮೇಲ್ಸೇತುವೆಯ ಎರಡೂ ಬದಿಯಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ಅಡ್ಡಲಾಗಿ ಇರಿಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. 

5-6 ವರ್ಷಗಳಿಂದ ಆಮೆ ವೇಗದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಜನತೆ ಬೇಸತ್ತಿದ್ದರು. ಇದರಿಂದಾಗಿ ಇನ್ನೂ ಕಾಮಗಾರಿಯೇ ಪೂರ್ಣವಾಗದ ಹಾಗೂ ಇನ್ನು ಕಾಮಗಾರಿ ನಡೆಯುತ್ತಿರುವ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರ ಆರಂಭವಾಗಿತ್ತು. ಇದರಿಂದ ಅನಾಹುತ ಸಂಭವಿಸಿದರೆ, ಯಾರು ಹೊಣೆ ಎಂಬ ಪ್ರಶ್ನೆ ವ್ಯಕ್ತವಾಗಿತ್ತು. 

ಗೌರಿಬಿದನೂರು ನಗರದಲ್ಲಿನ ರೈಲ್ವೆ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಸಿಮೆಂಟ್ ‌ಬ್ಲಾಕ್ ಗಳನ್ನು ‌ಅಡ್ಡಲಾಗಿ ಅಳವಡಿಸಿರುವುದು
ಗೌರಿಬಿದನೂರು ನಗರದಲ್ಲಿನ ರೈಲ್ವೆ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಸಿಮೆಂಟ್ ‌ಬ್ಲಾಕ್ ಗಳನ್ನು ‌ಅಡ್ಡಲಾಗಿ ಅಳವಡಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT