ಗೌರಿಬಿದನೂರು: ಇಲ್ಲಿನ ಅಲಕಾಪುರ ಚೆನ್ನಸೋಮೇಶ್ವರ ದೇವಾಲಯದಲ್ಲಿ ನಗರದ ನ್ಯಾಷನಲ್ ಪದವಿ ಕಾಲೇಜು ವತಿಯಿಂದ 7 ದಿನಗಳ ರಾಷ್ಟ್ರೀಯ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.

ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ರಾಷ್ಟ್ರಪ್ರೇಮ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಎನ್ಎಸ್ಎಸ್ ರೀತಿಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯದ ಜೊತೆಗೆ ಇಂಥ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಜನರಿಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ಅರಿವು ಮೂಡಿಬೇಕು.

ನ್ಯಾಷನಲ್ ಕಾಲೇಜಿನ ಗೌರವ ಕಾರ್ಯದರ್ಶಿ ವೆಂಕಟ ಶಿವಾರೆಡ್ಡಿ ಮಾತನಾಡಿದರು.

ಜಂಟಿ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ನ್ಯಾಷನಲ್ ಕಾಲೇಜಿನ ಉಳಿದ ಜಾಗದಲ್ಲಿ ಉತ್ತಮ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಈ ವೇಳೆ ಅಸೋಸಿಯೇಷನ್ ಉಪಾಧ್ಯಕ್ಷ ಮಂಜುನಾಥ್, ಶಂಕರ ನಾರಾಯಣ ಗುಪ್ತ, ಗೋಪಾಲ ಗೌಡ, ರಾಮಕೃಷ್ಣ, ಪದವಿ ಕಾಲೇಜು ಪ್ರಾಂಶುಪಾಲೆ ಡಾ. ಶೈಲಜಾ ಸಪ್ತಗಿರಿ, ಉಪ ಪ್ರಾಂಶುಪಾಲೆ ಪ್ರೊ. ನೇತ್ರ, ಪಿಯು ವಿಭಾಗದ ಪ್ರಾಂಶುಪಾಲ ಜಯರಾಮ್, ಉಪ ಪ್ರಾಂಶುಪಾಲ ನಂಜುಂಡಪ್ಪ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ ನಾಗರಾಜ್, ರಾಜೇಶ್ವರಿ, ಚಿದಂಬರ ರೆಡ್ಡಿ, ಪ್ರಕಾಶ್, ನವೀನ್, ಜಗದೀಶ್, ಸಂಗೀತ, ಹಾಗೂ ಎನ್ ಎಸ್ ಎಸ್ ಶಿಬಿರಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.